ಕೋತಿ ಚೇಷ್ಠೆ ಮಾಡಲು ಹೋದ ವ್ಯಕ್ತಿಯ ಕೈಬೆರಳನ್ನು ಸಿಂಹವೊಂದು ತುಂಡರಿಸಿದ ಘಟನೆ ಜಮೈಕಾದಲ್ಲಿ ನಡೆದಿದೆ.
ಶುಕ್ರವಾರ ಜಮೈಕಾದ ಸೇಂಟ್ ಎಲಿಜಬೆತ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ಕೆಲಸಗಾರ ಸುಮ್ಮನಿರಲಾರದೇ, ಕೇಜ್ ನಲ್ಲಿದ್ದ ಸಿಂಹವನ್ನು ಕೆಣಕಿದ್ದಾನೆ.
ಅಲ್ಲದೇ, ಕೇಜ್ ನ ತಂತಿಯೊಳಗೆ ಕೈಬೆರಳನ್ನು ಹಾಕಿ ಅದಕ್ಕೆ ತಿವಿಯುವ ಪ್ರಯತ್ನ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಿಂಹ ಕೈಬೆರಳನ್ನು ಕಚ್ಚಿ ಹಿಗ್ಗಾಮುಗ್ಗ ಎಳೆದಾಡಿದೆ. ಅದರಿಂದ ತಪ್ಪಿಸಿಕೊಳ್ಳಲು ಆತ ಪ್ರಯತ್ನಿಸಿದನಾದರೂ ಸಾಧ್ಯವಾಗಿಲ್ಲ. ಅಂತಿಮವಾಗಿ ಸಿಂಹ ಕೈಬೆರಳನ್ನು ತುಂಡರಿಸಿದೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಮೃಗಾಲಯದ ಸೇವಕನ ಬೆರಳಿನ ತುದಿಯನ್ನು ತುಂಡರಿಸಿದೆ. ಹೀಗೆ ತುಂಡಾದ ಬೆರಳಿನ ತುದಿ ಸಿಂಹದ ಬಾಯಲ್ಲೇ ಉಳಿಯಿತು ಮತ್ತು ಆಗ ತನ್ನ ಕೈಯನ್ನು ಹೊರ ತೆಗೆಯಲು ಸಾಧ್ಯವಾಗಿದೆ.
ಮತ್ತೋರ್ವ ಪ್ರತ್ಯಕ್ಷದರ್ಶಿ ಪ್ರಕಾರ, ಆರಂಭದಲ್ಲಿ ಇದೊಂದು ತಮಾಷೆಯಾಗಿದೆ ಎಂದು ಭಾವಿಸಿದ್ದೆ. ಆದರೆ, ಸಿಂಹ ಬೆರಳನ್ನು ಕಚ್ಚಿದೆ ಎಂಬುದರ ಬಗ್ಗೆ ನನಗೆ ಗೊತ್ತಿರಲೇ ಇಲ್ಲ. ಏಕೆಂದರೆ, ಮೃಗಾಲಯದ ಸೇವಕರು ಪ್ರಾಣಿಗಳ ಎದುರು ಈ ರೀತಿ ವರ್ತಿಸುವುದು ಸಾಮಾನ್ಯ ಎಂದು ಭಾವಿಸಿದ್ದೆ. ಸಿಂಹದ ದಾಳಿಯಿಂದಾಗಿ ಸೇವಕ ಕೆಳಗೆ ಬಿದ್ದಾಗಲೇ ಗಂಭೀರತೆಯ ಅರಿವು ನಮಗಾಯಿತು ಎಂದಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.
https://twitter.com/Richard35775465/status/1528488845716738050?ref_src=twsrc%5Etfw%7Ctwcamp%5Etweetembed%7Ctwterm%5E1528488845716738050%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-lion-sher-bites-off-mans-finger-zoo-sticks-hand-into-cage-leaves-internet-horrified-5407714%2F
https://twitter.com/Hidd3nTimobo/status/1528422621150429185?ref_src=twsrc%5Etfw%7Ctwcamp%5Etweetembed%7Ctwterm%5E