ಭಾರತೀಯ ರಸ್ತೆಗಳಲ್ಲಿನ ಅಪಾಯಕಾರಿ ಚಾಲನೆಗೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಒಂದೇ ಬೈಕ್‌ನಲ್ಲಿ ಅತಿವೇಗವಾಗಿ ಚಲಿಸುತ್ತಾ ಟ್ರಕ್‌ನಡಿ ಸಿಲುಕುವ ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.
@gharkekalesh ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು “ಅದೃಷ್ಟವಂತರು !” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಎರಡು ಪಥದ ರಸ್ತೆಯಲ್ಲಿ ಟ್ರಕ್ ಒಂದು ಬದಿಯಲ್ಲಿ ಚಲಿಸುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಕಾರು ಚಲಿಸುತ್ತಿದೆ. ಈ ಮಧ್ಯೆ, ಮೂವರು ವ್ಯಕ್ತಿಗಳು ಒಂದು ಬೈಕ್‌ನಲ್ಲಿ ಅತಿವೇಗವಾಗಿ ಚಲಿಸುತ್ತಾ ಟ್ರಕ್ ಮತ್ತು ಕಾರಿನ ನಡುವೆ ನುಗ್ಗಲು ಪ್ರಯತ್ನಿಸುತ್ತಾರೆ.
ಮುಂದೆ ಸಾಗುತ್ತಿದ್ದ ಸ್ಕೂಟರ್‌ಗೆ ಇದ್ದಕ್ಕಿದ್ದಂತೆ ಬ್ರೇಕ್ ಹಾಕಬೇಕಾಗಿ ಬಂದಿದ್ದು, ಇದರಿಂದ ಕಾರು ಚಾಲಕ ಕೂಡ ವೇಗ ಕಡಿಮೆ ಮಾಡಬೇಕಾಯಿತು. ಅದೇ ಸಮಯದಲ್ಲಿ, ಅತಿವೇಗದ ಬೈಕ್ ಕಾರಿಗೆ ಡಿಕ್ಕಿ ಹೊಡೆದು ಟ್ರಕ್‌ನಡಿ ಸಿಲುಕಿತು. ಸವಾರರು ಮತ್ತು ಪ್ರಯಾಣಿಕರು ರಸ್ತೆಗೆ ಬಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಈ ಭಯಾನಕ ದೃಶ್ಯ ಹಿಂಬಾಲಿಸುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಅತಿವೇಗದ ಚಾಲನೆಯ ಅಪಾಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನೇಕರು ಬೈಕ್ ಸವಾರರ ಬೇಜವಾಬ್ದಾರಿ ಚಾಲನೆಯನ್ನು ಖಂಡಿಸಿದ್ದಾರೆ.
Lucky him!
pic.twitter.com/gd879yG29E— Ghar Ke Kalesh (@gharkekalesh) February 16, 2025