ಇಂದು ವೈಎಸ್ ರಾಜಶೇಖರ ರೆಡ್ಡಿ ಅವರ 75ನೇ ಜನ್ಮದಿನ. ಪ್ರತಿ ವರ್ಷದಂತೆ ಈ ವರ್ಷವೂ, ಈಡುಪುಲಪಾಯ ಎಸ್ಟೇಟ್‌ನಲ್ಲಿರುವ ವೈಎಸ್‌ಆರ್ ಘಾಟ್‌ನಲ್ಲಿ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಕಳೆದ ಕೆಲವು ವರ್ಷಗಳಿಂದ ಜಗನ್ ಮೋಹನ್ ರೆಡ್ಡಿ ಹಾಗೂ ಸಹೋದರಿ ವೈ. ಎಸ್. ಶರ್ಮಿಳಾ ಬೇರೆ ಬೇರೆ ಗೇಟ್ ಮೂಲಕ ಘಾಟ್ ಗೆ ಬರ್ತಾರೆ. ಈ ಬಾರಿಯೂ ಬೇರೆ ಬೇರೆಯಾಗಿಯೇ ಬಂದು ತಮ್ಮ ಕೆಲಸ ಮುಗಿಸಿದ್ದಾರೆ. ಈ ವೇಳೆ ಜಗನ್ ಜೊತೆ ಅವರ ತಾಯಿ, ವೈ.ಎಸ್.ವಿಜಯಲಕ್ಷ್ಮಿ ಕೂಡ ಬಂದಿದ್ದರು. ಪ್ರಾರ್ಥನೆಯ ನಂತರ ವೈ. ಎಸ್. ವಿಜಯಲಕ್ಷ್ಮಿ ಭಾವುಕರಾದರು. ಅವರು ಮಗನ ಮುಂದೆ ಕಣ್ಣೀರು ಹಾಕ್ತಿದ್ದರೆ ತಾಯಿಯನ್ನು ಜಗನ್ ಮೋಹನ್ ರೆಡ್ಡಿ ನಿರ್ಲಕ್ಷಿಸಿ ಹೊರಗೆ ನಡೆದ್ರು.
ಅಮ್ಮನನ್ನು ಒಮ್ಮೆ ಸಂತೈಸಿದ ಜಗನ್ ನಂತ್ರ ಜನರಿಗೆ ಕೈ ಮುಗಿದು ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಲಿವೆಂದುಲ ಶಾಸಕ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ತಾಯಿಗೆ ಸಾಂತ್ವನ ಹೇಳಲು ಎರಡು ನಿಮಿಷ ಕೂಡ ನೀಡದಷ್ಟು ಬ್ಯುಸಿಯಾಗಿದ್ದಾರೆಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಕಳೆದ ಚುನಾವಣೆ ವೇಳೆ ಜಗನ್ ಪರ ಪ್ರಚಾರ ಮಾಡುವುದನ್ನು ತಪ್ಪಿಸಲು ವಿಜಯಲಕ್ಷ್ಮಿ ಅಮೆರಿಕಕ್ಕೆ ತೆರಳಿದ್ದರು. ಶರ್ಮಿಳಾ ಅವರಿಗೆ ಮತ ಹಾಕುವಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಅವರು ಜಗನ್ ಮೋಹನ್ ರೆಡ್ಡಿ ಬಗ್ಗೆ ಅಂತಹ ಯಾವುದೇ ಮನವಿ ಮಾಡಿರಲಿಲ್ಲ.