alex Certify ವಿಮಾನದಲ್ಲಿ ಸಿಗರೇಟ್​ ಸೇದಿದ ಇನ್​ಸ್ಟಾ ಪ್ರಭಾವಿ ಬಾಬಿ ಕಟಾರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಸಿಗರೇಟ್​ ಸೇದಿದ ಇನ್​ಸ್ಟಾ ಪ್ರಭಾವಿ ಬಾಬಿ ಕಟಾರಿಯಾ

ವಿಮಾನದಲ್ಲಿ ಧೂಮಪಾನ ಮಾಡುವುದಕ್ಕೆ ಅವಕಾಶ ಇಲ್ಲ. ಏಕೆಂದರೆ ಅದು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದೆಂಬ ಮುನ್ನೆಚ್ಚರಿಕೆಯಿಂದ ಈ ನಿಯಮ ಎಲ್ಲೆಡೆ ಜಾರಿಯಲ್ಲಿದೆ. ಆದರೆ, ಸುರಕ್ಷತಾ ಮಾನದಂಡಗಳನ್ನು ಸಂರ್ಪೂಣವಾಗಿ ನಿರ್ಲಕ್ಷಿಸಿ, ಸ್ಪೈಸ್ ಜೆಟ್​ ವಿಮಾನದೊಳಗೆ ಒಬ್ಬ ವ್ಯಕ್ತಿ ಸಿಗರೇಟ್​ ಹೊತ್ತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಗುರುಗ್ರಾಮ್​ ನಿವಾಸಿ ಮತ್ತು ಸಾಮಾಜಿಕ ಮಾಧ್ಯಮದ ಫಿಟ್ನೆಸ್​ ಪ್ರಭಾವಿ ಬಾಬಿ ಕಟಾರಿಯಾ ಎಂದು ಗುರುತಿಸಿದ್ದು, ವಿಮಾನದ ಸೀಟಿನ ಮೇಲೆ ಮಲಗಿ ಸಿಗರೇಟ್​ ಹಚ್ಚುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಘಟನೆ ಹಳೆಯದಾದರೂ ಇದೀಗ ವಿಡಿಯೋ ಬಹಿರಂಗವಾಗಿದೆ.

ಜನವರಿ 23, 2022 ರಂದು ಸ್ಪೈಸ್ ಜೆಟ್​ನಲ್ಲಿ ಈತ ದುಬೈನಿಂದ ನವದೆಹಲಿಗೆ ಪ್ರಯಾಣಿಸಿದಾಗ ವಿಡಿಯೊವನ್ನು ಚಿತ್ರೀಕರಿಸಲಾಗಿದೆ. ಈಗ ವೈರಲ್​ ಆಗಿರುವ ವಿಡಿಯೊ ಹಳೆಯದಾಗಿದೆ ಎಂದು ಹೇಳಲಾಗಿದೆ.

https://twitter.com/Nitish_nicks/status/1557580806755086337?ref_src=twsrc%5Etfw%7Ctwcamp%5Etweetembed%7Ctwterm%5E1557580806755086337%7Ctwgr%5Ec39ba5d15fa0a64f1d3bc3751ef33fd63ac488c2%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-instagram-influencer-bobby-kataria-seen-smoking-cigarette-spicejet-plane-fir-filed-watch-5566820%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...