ಭಾರತದ ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದರೆ, ಕೆಲವು ಪ್ರದೇಶಗಳು ಎಷ್ಟು ಜನಸಂದಣಿಯಿಂದ ಕೂಡಿರುತ್ತವೆ ಎಂಬುದು ಅರಿವಿರುತ್ತದೆ. ಮುಂಬೈ ಲೋಕಲ್ ಟ್ರೈನ್ ಅಥವಾ ದೆಹಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ಜನರಿಂದ ತುಂಬಿ ತುಳುಕಿರುತ್ತದೆ.
ಯುಎಸ್ ಅಥವಾ ಕೆನಡಾದಂತಹ ದೇಶಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ನಿರೀಕ್ಷಿಸಿರುವುದಿಲ್ಲ. ಕೆನಡಾದ ಟೊರೊಂಟೊದ ರಸ್ತೆಗಳು ರಾಜೀವ್ ಚೌಕ್ನಲ್ಲಿನ ಜನಸಂದಣಿಯಷ್ಟೇ ಕೆಟ್ಟದಾಗಿರುತ್ತವೆ ಎಂಬ ವಾಸ್ತವವನ್ನು ಇತ್ತೀಚೆಗೆ ಭಾರತೀಯ ಮಹಿಳೆಯೊಬ್ಬರು ತೋರಿಸಿದರು.
ಹೋಲಿಕೆಯ ವಿಡಿಯೊವನ್ನು ಇನ್ಸ್ಟಾ ರೀಲ್ಗಳಲ್ಲಿ ಪೋಸ್ಟ್ ಮಾಡಿದ್ದು, ಅದು 1.6 ಮಿಲಿಯನ್ ವೀಕ್ಷಣೆಗಳೊಂದಿಗೆ 49 ಸಾವಿರ ಲೈಕ್ಗಳೊಂದಿಗೆ ವೈರಲ್ ಆಗಿದೆ. ಕ್ಲಿಪ್ನಲ್ಲಿ ಸ್ಯಾಂಡಿ ಎಂಬ ಮಹಿಳೆ ನಗರದ ಪ್ರವಾಸಿ ತಾಣಗಳು ಮತ್ತು ಜನಪ್ರಿಯ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದನ್ನು ಕಾಣಬಹುದು.
ರಾಜೀವ್ ಚೌಕ್ನಲ್ಲಿರುವಂತೆಯೇ, ಈ ಪ್ರದೇಶವು ತಮ್ಮ ಸ್ಥಾನವನ್ನು ತಲುಪಲು ಓಡುತ್ತಿರುವ ಜನರಿಂದ ತುಂಬಿ ತುಳುಕುತ್ತಿತ್ತು. ಮಹಿಳೆಯು ವೈರಲ್ ವಿಡಿಯೊದಿಂದ ಆಡಿಯೊವನ್ನು ಬಳಸಿದ್ದು, ಇಬ್ಬರು ಪುರುಷರು ಬಸ್ನಲ್ಲಿ ಸೀಟಿಗಾಗಿ ಜಗಳವಾಡುವ ದನಿ ಇದೆ. ನೆಟ್ಟಿಗರು ಈ ವಿಡಿಯೊವನ್ನು ಕಂಡು ಕೆನಡಾವು ಭಾರತದಂತೆಯೇ ಜನಸಂದಣಿಯನ್ನು ಹೊಂದಿದೆ ಎಂಬುದು ನಿಜ ಎಂದು ಹೇಳಿದ್ದಾರೆ.