2022 ರ ಸೂರ್ಯವಂಶಿ ಚಿತ್ರದಿಂದ ಕತ್ರಿನಾ ಕೈಫ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಒಳಗೊಂಡ ಟಿಪ್ ಟಿಪ್ ಬರ್ಸಾ ಪಾನಿ 2.0 ಗೆ ಯುವತಿಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಕ್ರೇಜಿ ವೈರಲ್ ಆಗುತ್ತಿದೆ.
ಕ್ಲಿಪ್ ನಲ್ಲಿ ಭಾರತೀಯ-ಅಮೆರಿಕನ್ ಮಹಿಳೆಯು ಗುಲಾಬಿ ಮತ್ತು ಹಳದಿ ಬಿಕಿನಿಯನ್ನು ಧರಿಸಿ ಬೀಚ್‌ನಲ್ಲಿ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದು ನೆಟ್ಟಿಗರ ಮನಗೆದ್ದಿದೆ.
ರೀಲ್ 2.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು 40.6k ಲೈಕ್ಸ್ ಗಳನ್ನು ಪಡೆದುಕೊಂಡಿದೆ. ವಿಡಿಯೊದಲ್ಲಿರುವ ಯುವತಿ ಸೀರತ್ ಸೈನಿ, 200k ಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಅವರುಗಳಿಂದ ಮೆಚ್ಚುಗೆಯ ಕಮೆಂಟ್ ಗಳ ಸುರಿಮಳೆಯೇ ಆಗಿದೆ.