ಶಾರುಖ್ ಖಾನ್ ರನ್ನು ಬಾಲಿವುಡ್ ನ ಪ್ರಣಯರಾಜ ಎಂದು ಕರೆಯಲಾಗುತ್ತದೆ. ಕೈಗಳೆರಡನ್ನು ಅಗಲ ಮಾಡುತ್ತಾ ಎದೆಯನ್ನು ಉಬ್ಬಿಸಿ ಕತ್ತನ್ನು ನೆಟ್ಟಗೆ ಮಾಡುತ್ತಾ ಡ್ಯಾನ್ಸ್ ಮಾಡುವ ಅವರ ಸಿಗ್ನೇಚರ್ ಸ್ಟೆಪ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರ ಬಹುತೇಕ ಚಿತ್ರಗಳಲ್ಲಿ ಈ ಸಿಗ್ನೇಚರ್ ಸ್ಟೆಪ್ ಇದ್ದೇ ಇರುತ್ತದೆ.
ಇಂತಹ ಸಿಗ್ನೇಚರ್ ಸ್ಟೆಪ್ ಅನ್ನು ಅಮೇರಿಕಾದಲ್ಲಿರುವ ಭಾರತೀಯ ಮೂಲದ ನಿವಾಸಿ ಅಮೇರಿಕಾದ ಸಂದರ್ಶಕನಿಗೆ ಕಲಿಸುವ ಪ್ರಯತ್ನದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಬ್ರೂಕ್ಲಿನ್ ಬ್ರಿಡ್ಜ್ ಮೇಲೆ ನಿಂತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಅಮೇರಿಕಾದ ಸಂದರ್ಶಕ ಗೇಬ್ ಕೋಸ್ಟರ್ ಎಂಬಾತ ಡ್ಯಾನ್ಸ್ ಮಾಡುವಂತೆ ಹೇಳುತ್ತಾನೆ. ಅದಕ್ಕೆ ಭಾರತೀಯ ಮೂಲದ ವ್ಯಕ್ತಿ ತಡ ಮಾಡದೇ ಶಾರೂಖ್ ಖಾನ್ ಸ್ಟೈಲ್ ನಲ್ಲಿ ನಡೆದುಕೊಂಡು ಬರುತ್ತಾ ‘ಕಲ್ ಹೋ ನಾ ಹೋ’ ಚಿತ್ರದಲ್ಲಿನ ಸಿಗ್ನೇಚರ್ ಸ್ಟೆಪ್ ರೀತಿಯಲ್ಲಿ ಎರಡೂ ಕೈಗಳನ್ನು ಅಗಲಿಸಿ ಒಂದೆರಡು ಸ್ಟೆಪ್ ಗಳನ್ನು ಮಾಡಿ ತೋರಿಸುತ್ತಾರೆ.
ನನಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚು. ನಾನೊಬ್ಬ ಉತ್ತಮ ಡ್ಯಾನ್ಸರ್. ಆದರೆ, ಸಾರ್ವಜನಿಕವಾಗಿ ನಾನು ಡ್ಯಾನ್ಸ್ ಮಾಡುವುದಿಲ್ಲ ಎಂದು ಭಾರತೀಯನು ಹೇಳುತ್ತಾನೆ. ಅದಕ್ಕೆ ಗೇಬ್, ನನಗೆ ಡ್ಯಾನ್ಸ್ ಹೇಳಿಕೊಡುವಿರಾ? ಎಂದು ಕೇಳುತ್ತಾರೆ. ಆಗಬಹುದು ಎನ್ನುತ್ತಾ, ಮತ್ತದೇ ಶಾರೂಖ್ ಖಾನ್ ರ ಸಿಗ್ನೇಚರ್ ಸ್ಟೆಪ್ ಅನ್ನು ಹೇಳಿಕೊಡುತ್ತಾರೆ.
ಈ ವಿಡಿಯೋವನ್ನು 16 ಕೆ ಗಿಂತಲೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಅಮೇರಿಕಾ ಪ್ರಜೆಗೆ ಇಷ್ಟೊಂದು ಸುಲಭವಾದ ಡ್ಯಾನ್ಸ್ ಅನ್ನು ಹೇಳಿಕೊಡುವ ಬದಲು ಕಠಿಣವಾದ ಸ್ಟೆಪ್ ಹಾಕುವುದನ್ನು ಹೇಳಿಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಸಲಹೆ ನೀಡಿದ್ದಾರೆ.