ಅಂತರ್ಜಾಲದಲ್ಲಿ ’ಏನಪ್ಪಾ ಹೀಗೆಲ್ಲಾ……’ ಎಂದು ದಂಗುಬಡಿಸುವ ಅನೇಕ ರೀತಿಯ ಫ್ಯೂಶನ್ ಫುಡ್ಗಳ ವಿಡಿಯೋಗಳನ್ನು ನೋಡಿರುತ್ತೇವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಮಸಾಲೆ ದೋಸೆಯನ್ನು ಐಸ್ಕ್ರೀಂನೊಂದಿಗೆ ಫ್ಯೂಶನ್ ಮಾಡುತ್ತಿರುವುದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ.
’ದಿ ಗ್ರೇಟ್ಇಂಡಿಯನ್ ಫೂಡಿ’ ಹೆಸರಿನ ಪೇಜ್ ಒಂದರ ಮೂಲಕ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ಮಸಾಲೆ ದೋಸೆಯೊಂದರ ಒಳಗೆ ಹಾಕಲು ಐಸ್ಕ್ರೀಂ ರೋಲ್ ಒಂದನ್ನು ಸಿದ್ಧಪಡಿಸುತ್ತಿರುವುದನ್ನು ನೋಡಬಹುದಾಗಿದೆ.
ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್
ಮಸಾಲೆ ದೋಸೆಯನ್ನು ಸಪಾಟು ನೆಲದ ಮೇಲೆ ಚೂರುಗಳಾಗಿ ಒಡೆದು, ಬಳಿಕ ಐಸ್ಕ್ರೀಂ ಸ್ಕೂಪ್ಗಳನ್ನು ಅದರ ಮೇಲೆ ಹಾಕಿ ಮಿಶ್ರಣ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಮಿಶ್ರಣವನ್ನು ಚೆನ್ನಾಗಿ ಹದಕ್ಕೆ ತಂದ ಬಳಿಕ ರೋಲ್ಗಳನ್ನಾಗಿ ಮಾಡಿ, ಅವುಗಳ ಮೇಲೆ ಆಲೂಗಡ್ಡೆ ಹಾಕಿ ಪಕ್ಕದಲ್ಲಿ ಎರಡು ಚಟ್ನಿಗಳೊಂದಿಗೆ ಸರ್ವ್ ಮಾಡಲಾಗಿದೆ.
“ಇದನ್ನು ನೋಡುವ ದೋಸೆ ಪ್ರಿಯರಿಗೆ ತಲೆನೋವು ಬರುವುದು ಖಂಡಿತಾ,” ಎಂದು ವಿಡಿಯೋ ನೋಡಿದ ನೆಟ್ಟಿಗರೊಬ್ಬರು ತಿಳಿಸಿದರೆ, “ದಕ್ಷಿಣ ಭಾರತದ ಇಂಥ ಒಳ್ಳೆಯ ಆಹಾರವನ್ನು ದೆಹಲಿಯ ಈ ತಿಕ್ಕಲು ವ್ಯಕ್ತಿ ನೋಡಲೂ ಸಹ ಕೆಟ್ಟದಾಗಿರುವಂತೆ ಮಾಡಿದ್ದಾನೆ,” ಎಂದು ಮತ್ತೊಬ್ಬರು ಬರೆದಿದ್ದಾರೆ. “ರೋಟಿ ಸಬ್ಜಿ, ರಾಜ್ಮಾ ಚಾವಲ್, ಚೋಲೆ ಬತೂರೆ ಐಸ್ಕ್ರೀಂಗಾಗಿ ಕಾಯುತ್ತಿದ್ದೇನೆ,” ಎಂದು ಮತ್ತೊಬ್ಬರು ಬರೆದಿದ್ದಾರೆ.