ಬೇಸಿಗೆ ಬಿಸಿಲಿನ ತಾಪ ಎಂಥವರನ್ನೂ ಹೈರಾಣಾಗಿಸಿಬಿಡುತ್ತದೆ. ಇಂತಹ ಬೇಗೆಯ ನಡುವೆಯೂ ಬದುಕಿನಲ್ಲೊಂದಿಷ್ಟು ಲವಲವಿಕೆ ತುಂಬಲು ಒಂದಿಷ್ಟು ತಮಾಷೆ, ಮನಸ್ಸಿಗೆ ನೋವಾಗದಂತಹ ತರ್ಲೆ ಇದ್ದರೆ ಚೆಂದ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ವೈರಲ್ ಆದ ವಿಡಿಯೋ ಕೊಂಚ ಭಿನ್ನವಾದುದು.
ಹೈದರಾಬಾದ್ ಎಂದ ಮೇಲೆ ಕೇಳಬೇಕೆ ? ತಾಪಮಾನ 40 ಡಿಗ್ರಿ ದಾಟಿರುತ್ತದೆ. ಬಿಸಿಲಿನ ತಾಪ ಎಷ್ಟಿದೆ ಎಂಬುದನ್ನು ತೋರಿಸಿಕೊಡಲು ವ್ಯಕ್ತಿಯೊಬ್ಬರು ಕಂಡುಕೊಂಡ ಮಾರ್ಗ ಎಲ್ಲರ ಗಮನ ಸೆಳೆದಿದೆ. ಈ ವ್ಯಕ್ತಿ ತನ್ನ ವೆಸ್ಪಾ ಸ್ಕೂಟರ್ನ ಸೀಟು ಬಿಸಿಲಿಗೆ ಎಷ್ಟು ಬಿಸಿಯಾಗಿದೆ ಎಂಬುದನ್ನು ತೋರಿಸುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಅದರಲ್ಲಿ ಅವರು, ಸ್ಕೂಟರ್ನ ಸೀಟಿನ ಮೇಲೆ ದೋಸೆ ಹುಯ್ಯುವ ದೃಶ್ಯವಿದೆ. ಕೆಲವು ಸೆಕೆಂಡ್ಗಳ ಬಳಿಕ ಆ ದೋಸೆಯನ್ನು ಕವುಚಿ ಹಾಕಿದ್ದೂ ಕಾಣುತ್ತದೆ. ಅಲ್ಲಿಗೆ ಬಿಸಿಲಿ ತಾಪದ ಅಂದಾಜು ಎಲ್ಲರಿಗೂ ಆಗುವಂತಾಯಿತು. ಹೆಂಚಿನಲ್ಲಿ ದೋಸೆ ಬೆಂದಾಗ ಹಿಂಬದಿ ಸಿಗುವ ಚಿನ್ನದ ಬಣ್ಣ ಇಲ್ಲೂ ಕಂಡುಬಂದಿದೆ.
ಭಾಗ್ಯನಗರದ ಸ್ಟ್ರೀಟ್ ಫುಡ್ ಎಂಬ ಹೆಸರಿನ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಆಗಿದೆ. ಈಗಾಗಲೇ 23 ದಶಲಕ್ಷ ಜನ ಇದನ್ನು ವೀಕ್ಷಿಸಿದ್ದಾರೆ.
https://youtu.be/sE2fXwoXo1M