ಎರಡು ಗೋಡೆಗಳ ನಡುವೆ ಸಿಕ್ಕಿಬಿದ್ದ ನಾಗರ ಹಾವಿನ ಜೀವ ಉಳಿಸಲು ಮನೆಯನ್ನು ಕೆಡವಿದ ಕುತೂಹಲಕಾರಿ ಘಟನೆ ನಡೆದಿದೆ. ಹರಿಯಾಣದ ಫತೇಹಾಬಾದ್ನ ತೊಹಾನಾ ಪ್ರದೇಶದಲ್ಲಿ ಎರಡು ಮನೆಗಳ ಗೋಡೆಗಳನ್ನು ಕೆಡವದೆ ಹೊರಬರಲು ಅಸಾಧ್ಯವಾದ ರೀತಿಯಲ್ಲಿ ನಾಗರಹಾವು ಗೋಡೆಗಳ ನಡುವೆ ಸಿಕ್ಕಿಕೊಂಡಿತ್ತು. ನಾಗರಹಾವನ್ನು ರಕ್ಷಿಸಲು ಮನೆಯ ಒಂದು ಭಾಗದ ಗೋಡೆ ಹಾಗೂ ಮೇಲ್ಛಾವಣಿಯನ್ನು ಒಡೆಯಲೇ ಬೇಕಿತ್ತು. ಅಂತಿಮವಾಗಿ ಹಾವಿನ ಜೀವ ಉಳಿಸಲು ಮನೆಯನ್ನು ಕೆಡವಲಾಗಿದೆ.
‘ಲವ್ 360’ ಚಿತ್ರದ ವಿಡಿಯೋ ಸಾಂಗ್ ರಿಲೀಸ್
ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ನವಜೋತ್ ಧಿಲ್ಲೋನ್ ಇಡೀ ಕಾರ್ಯಾರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಣೆ ನೀಡಿದ್ದು, ಹಾವಿನ ಸಂರಕ್ಷಣೆಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಮನೆಯ ಮಾಲೀಕರಿಂದ ಅನುಮತಿ ಪಡೆದು, ಗೋಡೆ ಹಾಗೂ ಮೇಲ್ಛಾವಣಿ ಕೆಡವಲಾಯಿತು. ಕೊನೆಗೆ ಹಾವನ್ನು ರಕ್ಷಿಸಲಾಯಿತು. ಅಷ್ಟರಲ್ಲಿ ನಾಗರ ಹಾವು ನೋಡಲು ಅಪಾರ ಜನಸ್ತೋಮ ನೆರೆದಿತ್ತು ಎಂದು ಹೇಳಿಕೊಂಡಿದ್ದಾರೆ. ರಕ್ಷಣೆಗೊಂಡ ಹಾವನ್ನು ವನ್ಯಜೀವಿ ಸಂರಕ್ಷಣಾ ತಂಡ ಸುರಕ್ಷಿತ ಸ್ಥಳಕ್ಕೆ ಬಿಟ್ಟಿತು.