ಶ್ರೀಲಂಕಾದ ಸಿಂಹಳಿಯ ಹಾಡಾದ ‘ಮನಿಕೆ ಮಗೆ ಹಿತೆ’ಯ ಕ್ರೇಜ್ ದಿನೇ ದಿನೇ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಈ ಹಾಡು ಇಂಟರ್ನೆಟ್ ನಲ್ಲಿ ಈಗಲೂ ಎಲ್ಲರ ಹಾಟ್ ಫೇವರಿಟ್ ಆಗಿದೆ.
ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೆ ತಮ್ಮದೇ ಶೈಲಿಯಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಇದೀಗ ಈ ಹಾಡಿಗೆ ಸನ್ಯಾಸಿಗಳು ಕುಣಿದಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಿಮಾಲಯದ ಸನ್ಯಾಸಿಗಳು ಮಾಡಿರುವ ನೃತ್ಯದ ವಿಡಿಯೋ ವೈರಲ್ ಆಗಿದೆ. ಇಬ್ಬರು ಸನ್ಯಾಸಿಗಳು ‘ಮನಿಕೆ ಮಗೆ ಹಿತೆ’ ಹಾಡಿನ ಲಯಕ್ಕೆ ತಕ್ಕಂತೆ ನೃತ್ಯ ಮಾಡಿದ್ದಾರೆ. ಈ ಮೂಲಕ ಸಂಗೀತಕ್ಕೆ ಯಾವುದೇ ಗಡಿ, ಭಾಷೆ, ಜನಾಂಗ, ಧರ್ಮಗಳಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸದ್ಯ, ಸನ್ಯಾಸಿಗಳು ನೃತ್ಯ ಮಾಡಿರುವ ಈ ವಿಡಿಯೋ ವೈರಲ್ ಆಗಿದ್ದು, 8000 ಕ್ಕೂ ಹೆಚ್ಚು ಲೈಕ್ ಗಳಿಸಿದೆ. ತಮ್ಮ ನೃತ್ಯದ ಮೂಲಕ ಸಂತೋಷವನ್ನು ಹರಡಿದ ಸನ್ಯಾಸಿಗಳ ಬಗ್ಗೆ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಸಹ, ಈ ಸನ್ಯಾಸಿಗಳು ಮಾಡಿರುವ ನೃತ್ಯದ ವಿಡಿಯೋಗಳನ್ನು ಹಂಚಿಕೊಂಡಿದ್ದು, ಬಹಳಷ್ಟು ಟ್ರೆಂಡ್ ಅನ್ನೇ ಸೃಷ್ಟಿಸಿವೆ.
https://youtu.be/EDh11aA60mI