
ಗಂಟೆಗಟ್ಟಲೆ ರಸ್ತೆ ಟ್ರಾಫಿಕ್ ನಲ್ಲಿ ಸಿಲುಕೋದು ಪ್ರತಿಯೊಬ್ಬರಿಗೂ ಹಿಂಸೆ. ಸರಿಯಾದ ಸಮಯದಲ್ಲಿ ಗಮ್ಯ ಸ್ಥಾನ ತಲುಪಲಾಗದೇ ಸುಮ್ಮನೇ ಟ್ರಾಫಿಕ್ ನಲ್ಲಿ ಸಿಲುಕಿ ನರಳೋದು ಭಾರೀ ಕಿರಿಕಿರಿಯನ್ನುಂಟು ಮಾಡುತ್ತದೆ.
ಆದರೆ ಇಂತಹ ಸಮಯದಲ್ಲಿ ವ್ಯಕ್ತಿಯೊಬ್ಬ ಮಾಡಿರೋ ಕೆಲಸ ಕೇಳಿದ್ರೆ ನೀವು ಹುಬ್ಬೇರಿಸ್ತೀರಾ. ಹರಿಯಾಣದ ಗುರುಗ್ರಾಮದಲ್ಲಿ ಉದ್ದದ ಟ್ರಾಫಿಕ್ ನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಕಾರ್ ನ ಮೇಲೆ ಕೂತು ಮದ್ಯ ಸೇವಿಸಿದ್ದಾನೆ.
ಈ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಟ್ರಾಫಿಕ್ ನಡುವೆ ಕಾರಿನ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬರು ಶಾಂತವಾಗಿ ಮದ್ಯ ಸೇವಿಸಿ ಆನಂದಿಸುತ್ತಿರುವುದನ್ನು ಟ್ವಿಟ್ಟರ್ ವೀಡಿಯೊ ತೋರಿಸಲಾಗಿದೆ.
ವ್ಯಕ್ತಿಯ ವರ್ತನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಜನ ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ತೆಗೆದುಕೊಂಡಿದ್ದಾರೆ. ಹಲವರು ವಿಡಿಯೋದಲ್ಲಿ ವ್ಯಕ್ತಿಯ ವರ್ತನೆ ಬಗ್ಗೆ ಭಾರೀ ಆಕ್ರೋಶ ಹೊರಹಾಕಿದ್ದು, ಈ ರೀತಿ ಮಾಡಿದರೆ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.