ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಕ್ವಿನ್ಸ್ ರಾಕ್ಸ್ ಸಮುದ್ರದಲ್ಲಿ ಮಸ್ತಿಗೆಂದು ತೆರಳಿದ್ದ ಗುಂಪು ಬೀಚ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಾರ್ಕ್ ಅನ್ನು ರಕ್ಷಿಸಿದೆ.
ಕ್ವಿನ್ಸ್ ರಾಕ್ಸ್‌ಗೆ ಭೇಟಿ ನೀಡುತ್ತಿದ್ದ ಗುಂಪು ಮ್ಯಾಕೋ ಶಾರ್ಕ್ ಎಂಬ ಜಾತಿಗೆ ಸೇರಿದ ಶಾರ್ಕ್ ಅನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು, ಅದನ್ನು ಸಮುದ್ರಕ್ಕೆ ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
BIG NEWS: ಬಾಂಬೆ ಟೀಮ್ ಗೆ ಸಂಪುಟದಲ್ಲಿ ಕೋಕ್ ವಿಚಾರ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಚಿವ ಮುನಿರತ್ನ
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಮ್ಯಾಕೋ ಶಾರ್ಕ್‌ಗಳನ್ನು ಅಳಿವಿನಂಚಿನಲ್ಲಿರುವ ಶಾರ್ಕ್ ಎಂದು ಗುರುತಿಸಿದೆ. ಆದ್ದರಿಂದ, ಮ್ಯಾಕೋ ಶಾರ್ಕ್ ಅನ್ನು ರಕ್ಷಿಸುವ ಪುರುಷರ ಗುಂಪನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ನಿಜವಾಗಿಯೂ ಅತ್ಯತ್ತಮ ಕಾರ್ಯ ಎಂದು ಶ್ಲಾಘಿಸಿದ್ದಾರೆ.
ಇದೇ ರೀತಿಯ ಮತ್ತೊಂದು ವಿಡಿಯೋದಲ್ಲಿ ಕ್ವಿನ್ಸ್ ರಾಕ್ಸ್ ಸಮುದ್ರದಲ್ಲಿ ಮತ್ತೊಂದು ಶಾರ್ಕ್ ದಡದಲ್ಲಿ ನೀರಿನ ಅಲೆ ಬಂದಾಗ ಒದ್ದಾಡುವುದು, ಮುಂದಕ್ಕೆ ಚಲಿಸುವುದನ್ನು ಕಾಣಬಹುದು.