ಜಿಪಿಎಸ್ ಮೂಲಕ ಕಾರ್ ನಲ್ಲಿ ಮಾರ್ಗ ಹುಡುಕ್ತಿದ್ದ ಪ್ರವಾಸಿಗರು ಬಂದರಿನ ನೀರಿಗೆ ಬಿದ್ದಿದ್ದಾರೆ.
ಹವಾಯಿಯಲ್ಲಿ ಪ್ರವಾಸಿಗರು ಹೊನೊಕೊಹೌ ಬಂದರಿಗೆ ಬಿದ್ದಿರೋ ಘಟನೆ ನಡೆದಿದೆ.
ಏಪ್ರಿಲ್ 29 ರಂದು ಪೆಸಿಫಿಕ್ ಮಹಾಸಾಗರದ ದ್ವೀಪಸಮೂಹದ ಕೈಲುವಾ ಕೋನಾ ಪಟ್ಟಣದಲ್ಲಿ ಮಾಂತಾ ರೇ ಸ್ನೋರ್ಕೆಲ್ ಟೂರ್ ಕಂಪನಿಯನ್ನು ಹುಡುಕುತ್ತಿದ್ದಾಗ ಕಾರ್ ನಲ್ಲಿದ್ದವರು ತಮ್ಮ ಕಾರನ್ನು ನೇರವಾಗಿ ಬಂದರಿನತ್ತ ಓಡಿಸಿದರು. ತಪ್ಪು ತಿರುವು ತೆಗೆದುಕೊಂಡ ಅವರು ನೀರಿಗೆ ಬೀಳ್ತಿದ್ದಂತೆ ಮುಳುಗುತ್ತಿರುವ ಕಾರಿನಿಂದ ಸಿಕ್ಕಿಬಿದ್ದ ಪ್ರವಾಸಿಗರನ್ನು ರಕ್ಷಿಸಲು ಬಂದರಿನ ಸಿಬ್ಬಂದಿ ನೀರಿಗೆ ಜಿಗಿದು ರಕ್ಷಿಸಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ. ಕೆಲ ಜನ ಈ ಘಟನೆಯನ್ನು ತಮಾಷೆಯಾಗಿ ತೆಗೆದುಕೊಂಡ್ರೆ ಕೆಲವರು ಕಾರ್ ನಲ್ಲಿದ್ದವರನ್ನು ದೂಷಿಸಿದ್ದಾರೆ. ಮತ್ತೆ ಕೆಲವರು ಜಿಪಿಎಸ್ ಮೇಲೆ ಆರೋಪಿಸಿದ್ದಾರೆ.