
ಮನುಷ್ಯನ ಪ್ರೀತಿ ಸಿಕ್ಕಿದರೆ ಎಂತಹ ಪ್ರಾಣಿಗಳೂ ಸಹ ಅವನೊಂದಿಗೆ ಅತ್ಯಂತ ವಿನೋದದಿಂದ ಕಾಲ ಕಳೆಯುತ್ತವೆ. ಇವುಗಳಲ್ಲಿ ಪ್ರಮುಖವಾಗಿ ನಾಯಿ, ಬೆಕ್ಕು, ಆನೆ ಸೇರಿದಂತೆ ಇನ್ನಿತರೆ ಪ್ರಾಣಿಗಳು ಮನುಷ್ಯನೊಂದಿಗೆ ಬೆರೆತು ವಿನೋದದ ರಸದೌತಣವನ್ನು ನೀಡುತ್ತವೆ. ಇಂತಹ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸಾಕಷ್ಟು ಅಪ್ಲೋಡ್ ಆಗುತ್ತವೆ ಮತ್ತು ವೈರಲ್ ಸಹ ಆಗುವುದನ್ನು ನಾವು ನೋಡಿದ್ದೇವೆ.
ಇಂತಹ ಸಾಲಿಗೆ ಕುದುರೆಯೊಂದು ಸೇರ್ಪಡೆಗೊಂಡಿದೆ. ಈ ಕುದುರೆ ಜೇಂಟ್ ಬಾಲ್ ಜೊತೆಗೆ ಆಟವಾಡುತ್ತಿರುವ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ ಮತ್ತು ಮೆಚ್ಚುಗೆಯನ್ನೂ ಪಡೆಯುತ್ತಿದೆ.
ಹಸಿರು ಮೈದಾನದಲ್ಲಿ ಈ ಕುದುರೆ ಓಡುತ್ತಿರುವ ವೇಳೆಯಲ್ಲಿ ಅದರ ಮಾಲೀಕ ಜೇಂಟ್ ಬಾಲ್ ಅನ್ನು ಎಸೆಯುತ್ತಾನೆ. ಕುದುರೆ ಅದನ್ನು ಹಿಡಿಯಲು ಬಾಲಿನ ಹಿಂದೆ ಓಡುತ್ತಲೇ ಅದರೊಂದಿಗೆ ಚೆಲ್ಲಾಟವಾಡುತ್ತಿರುವುದು ಮಾಲೀಕನಿಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡಿದೆ.
ಹೀಗೆ ಹತ್ತಾರು ಬಾರಿ ಬಾಲನ್ನು ಕುದುರೆ ಕಡೆಗೆ ಎಸೆಯುತ್ತಾ ಮಾಲೀಕ ಅದರೊಂದಿಗೆ ಮಕ್ಕಳ ರೀತಿಯಲ್ಲಿ ಆಟವಾಡುತ್ತಿರುವುದು ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, `ಚೆಂಡಿನೊಂದಿಗೆ ಕುದುರೆಯ ಆಟ’ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿನೋದದ ವಿಡಿಯೋಗೆ 1.8 ಮಿಲಿಯನ್ ನಷ್ಟು ವೀಕ್ಷಣೆ ಆಗಿದ್ದು, 9000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.
https://twitter.com/buitengebieden/status/1538427728357105664
https://twitter.com/Patrici24744309/status/1538509263915651072?ref_src=twsrc%5Etfw%7Ctwcamp%5Etweetembed%7Ctwterm%5E1538509263915651072%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-happy-horse-runs-around-plays-with-giant-ball-cute-animal-video-5466354%2F