ಚರಂಡಿಯಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ಹುಡುಗಿಯರ ಗುಂಪಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹೆಣ್ಣು ಮಕ್ಕಳ ಗುಂಪು ರಸ್ತೆಯಲ್ಲಿ ಸಾಗುವಾಗ ಬೆಕ್ಕಿನ ಮರಿಯ ಆರ್ತನಾದ ಕೇಳುತ್ತದೆ. ಚರಂಡಿಯೊಳಗೆ ಅದು ಸಿಕ್ಕಿಕೊಂಡಿರುವುದು ಅವರ ಗಮನಕ್ಕೆ ಬರುತ್ತದೆ. ಕೂಡಲೇ ಅದರ ರಕ್ಷಣೆಗೆ ಮುಂದಾಗುತ್ತಾರೆ.
ಬೆಕ್ಕನ್ನು ಹೊರತೆಗೆಯಲು ಆ ಗುಂಪು ತಮ್ಮ ಕೆೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಕೊನೆಗೆ ಹುಡುಗಿಯೊಬ್ಬಳು ನೆಲದ ಮೇಲೆ ಮಲಗಿದ್ದು, ಬೆಕ್ಕನ್ನು ಎಳೆದುಕೊಳ್ಳಲು ಚರಂಡಿಯೊಳಗೆ ತನ್ನ ಕೈ ಚಾಚುತ್ತಾಳೆ. ಅವರ ಸಂಟಿತ ಪ್ರಯತ್ನಗಳ ನಂತರ, ಕಾರ್ಯಾಚರಣೆಯಲ್ಲಿ ಅಂತಿಮವಾಗಿ ಯಶಸ್ವಿಯಾದರು. ಬೆಕ್ಕಿನ ಮರಿ ಹೊರ ಬಂದ ನಂತರ ಅವರ ಮುಖದಲ್ಲಿ ಸಂತೋಷ ನಲಿದಾಡುತ್ತಿತ್ತು.
ಈ ಹುಡುಗಿಯ ಕ್ವಿಕ್ ರೆಸ್ಪಾನ್ಸ್ ಜಾಲತಾಣಿಗರ ಮೇಲೆ ಪ್ರಭಾವ ಬೀರಿತು. ನೂರಾರು ಮಂದಿ ಕಮೆಂಟ್ ಮಾಡಿ ಆಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.