alex Certify ದಂಗಾಗಿಸುವಂತಿದೆ ವರನ ಪಕ್ಕದಲ್ಲೇ ಇದ್ದ ಸ್ನೇಹಿತ ಮಾಡಿದ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ವರನ ಪಕ್ಕದಲ್ಲೇ ಇದ್ದ ಸ್ನೇಹಿತ ಮಾಡಿದ ಕೆಲಸ…!

Viral Video: Groom's Friend Secretly Steals Cash From Money Garland, Netizens Call it 'Indian Money Heist' | Watchಮದುವೆ ಸಮಾರಂಭ ತಮಾಷೆ, ಮೋಜು-ಮಸ್ತಿ ಎಲ್ಲೂ ಇರುತ್ತದೆ. ಇದರ ನಡುವೆ ಕಳ್ಳರು ಕೂಡ ಸ್ನೇಹಿತರ/ಸಂಬಂಧಿಕರ ಸೋಗಿನಲ್ಲಿ ಹಾಜರಾಗಿರುತ್ತಾರೆ. ನಗದು, ಬೆಲೆಬಾಳುವ ವಸ್ತುಗಳು, ಆಭರಣಗಳೊಂದಿಗೆ ಪಲಾಯನ ಮಾಡಿರುವ ಹಲವಾರು ನಿದರ್ಶನಗಳಿವೆ. ಮದುವೆ ಮನೆಯಲ್ಲಿರುವವರು ಆಚರಣೆಗಳಲ್ಲಿ ನಿರತರಾಗಿರುವುದರಿಂದ, ಕಳ್ಳರು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಆದರೆ, ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವರನ ಸ್ನೇಹಿತನೊಬ್ಬ ಕಳ್ಳನಾಗಿದ್ದಾನೆ…!

ನೋಟಿನ ಹಾರವನ್ನು ಧರಿಸಿರುವ ವರನೊಬ್ಬ ಮದುವೆ ಮಂಟಪದಲ್ಲಿ ಕುಳಿತಿದ್ದಾನೆ. ಈತನ ಸುತ್ತಾ ಸ್ನೇಹಿತರು ಮತ್ತು ಸಂಬಂಧಿಕರು ನೆರೆದಿದ್ದಾರೆ. ಆತನ ಕೊರಳಲ್ಲಿ ಹಣದ ದೊಡ್ಡ ಹಾರವನ್ನೂ ಹಾಕಲಾಗಿತ್ತು. ಉತ್ತರ ಭಾರತದ ಹಲವಾರು ಸಮುದಾಯಗಳಲ್ಲಿ ಹಣದ ಹಾರವು ಸಾಂಪ್ರದಾಯಿಕ ಭಾಗವಾಗಿದೆ. ವರನ ಪಕ್ಕದಲ್ಲಿ ಕುಳಿತಿರುವ ಸ್ನೇಹಿತೊಬ್ಬ, ಯಾರಿಗೂ ತಿಳಿಯದಂತೆ ಕೆಲವು ನೋಟಗಳನ್ನು ಕದಿಯಲು ಪ್ರಯತ್ನಿಸಿದ್ದಾನೆ. ಕೆಲವು ವಿಫಲ ಪ್ರಯತ್ನಗಳ ನಂತರ, ಅವನು ಕೆಲವು ನೋಟುಗಳನ್ನು ಕದ್ದು ತನ್ನ ಜೇಬಿನಲ್ಲಿ ಇಡುತ್ತಾನೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 83,000ಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಕಾಮೆಂಟ್‌ಗಳು ವೈರಲ್ ಆಗಿದೆ. ಅನೇಕ ಬಳಕೆದಾರರು ಇದನ್ನು ತಮಾಷೆಯಾಗಿ ಇಂಡಿಯನ್ ಮನಿ ಹೀಸ್ಟ್ ಎಂದು ಕರೆದರೆ, ಮತ್ತೊಬ್ಬರು ಅದನ್ನು ಹೇರಾ ಫೆರಿ-3 ಎಂದು ಕರೆದಿದ್ದಾರೆ. ಇತರರು ಕಾಮೆಂಟ್‌ ವಿಭಾಗವನ್ನು ನಗು ಎಮೋಜಿಗಳೊಂದಿಗೆ ತುಂಬಿದ್ದಾರೆ. ಆದರೆ, ಅನೇಕರು ಸ್ನೇಹಿತನಿಗೆ ದ್ರೋಹ ಬಗೆದಿದ್ದಕ್ಕಾಗಿ ಟೀಕಿಸಿದ್ದಾರೆ.‌

https://youtu.be/iY6GcaOgEsE

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...