ಉತ್ತರ ಪ್ರದೇಶದ ಮುಜಾಫರ್ ನಗರದ ಜನನಿಬಿಡ ರಸ್ತೆಯೊಂದರಲ್ಲಿ ಮದುವೆ ಮಂಟಪಕ್ಕೆ ತೆರಳುವ ಮುನ್ನ ವರನೊಬ್ಬ ತನ್ನ ಸ್ನೇಹಿತರೊಂದಿಗೆ ತೆರೆದ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಸಾಗಿದ್ದು, ಇದೀಗ ದಂಡ ಕಟ್ಟಿದ್ದಾನೆ.
ಚಲಿಸುವ ಕಾರುಗಳಲ್ಲಿ ಆ ತಂಡ ಅಪಾಯಕಾರಿ ರೀತಿ ಡ್ಯಾಮ್ಸ್ ಮಾಡುವುದು ವಿಡಿಯೊದಲ್ಲಿ ಕಾಣಿಸುತ್ತದೆ, ವರ ಕೆಂಪು ಬಣ್ಣದ ಐಷಾರಾಮಿ ಆಡಿ ಕಾರಿನಲ್ಲಿ ಚಲಿಸುವಾಗ ಸ್ನೇಹಿತರು ದಾರಿಹೋಕ ಪಾದಚಾರಿ, ವಾಹನಸವಾರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಂತೆ ಕುಣಿದು ಕುಪ್ಪಳಿಸಿ ಸಾಗುತ್ತಾರೆ.
ಕಾರಿನ ಕಿಟಕಿಗಳಿಗೆ ನೇತಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮತ್ತು ಡ್ಯಾನ್ಸ್ ಮಾಡುತ್ತಾ ಅಬ್ಬರಿಸುವುದು ಸಹ ವಿಡಿಯೋದಲ್ಲಿ ಕಂಡುಬರುತ್ತದೆ.
ಅಂಕಿತ್ ಕುಮಾರ್ ಎಂಬುವರು ವಿಡಿಯೋ ರೆಕಾರ್ಡ್ ಮಾಡಿ ಮುಜಫರ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹರಿದ್ವಾರದಿಂದ ನೋಯ್ಡಾಕ್ಕೆ ನನ್ನ ಪ್ರಯಾಣದ ಸಮಯದಲ್ಲಿ, ಕೆಲವರು ತಮ್ಮ ಮನರಂಜನೆಗಾಗಿ ಇತರರ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದ್ದರು. ಸಂಚಾರಿ ಪೊಲೀಸರು ಈ ವಿಷಯ ಅರಿತುಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ, ಎಂದು ಅವರು ಟ್ವೀಟ್ ಮಾಡಿದ್ದಾರೆ.
BIG NEWS: ರಾಜಭವನ ಚಲೋಗೆ ಮುಂದಾದ ಕಾಂಗ್ರೆಸ್; ಕೈ ನಾಯಕರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದ ಸಚಿವ ಸುಧಾಕರ್
ನಂತರ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ವಿಡಿಯೊವನ್ನು ಹಂಚಿಕೊಂಡು, ದೆಹಲಿ ನೋಂದಣಿ ಸಂಖ್ಯೆ ಹೊಂದಿರುವ ಒಂಬತ್ತು ಕಾರುಗಳ ಮಾಲೀಕರಿಗೆ 2 ಲಕ್ಷ ರೂಪಾಯಿಗಳ ದಂಡದ ಚಲನ್ ವಿಧಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಯಾದವ್ ಸಂಚಾರ ಪೊಲೀಸರಿಗೆ ಎಚ್ಚರಿಕೆ ನೀಡಿ, ವರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.
https://twitter.com/muzafarnagarpol/status/1536586039942590464?ref_src=twsrc%5Etfw%7Ctwcamp%5Etweetembed%7Ctwterm%5E1536586039942590464%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-groom-friends-dance-open-audi-stunt-rs-2-lakh-fine-muzaffarnagar-haridwar-highway-5454786%2F