
ನವ ದಂಪತಿಗಳು ತಮ್ಮ ಮದುವೆ ಮಂಟಪದಲ್ಲಿ ಪರಸ್ಪರರನ್ನು ನೋಡಿಕೊಂಡ ಭಾವುಕರಾದ ಕ್ಷಣಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ’ವೆಡ್ಡಿಂಗ್_ಬೆಲ್ಸ್’ ಹೆಸರಿನ ಚಾನೆಲ್ ಒಂದರ ಮೂಲಕ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
“ಇದು ಭಾರೀ ಭಾವುಕವಾಗಿದೆ. ಅವರಿಬ್ಬರ ಪ್ರೀತಿ ಬಹಳ ಶುದ್ಧ ಮತ್ತು ಬಲವಾದದ್ದು..! ” ಎಂದು ಕ್ಯಾಪ್ಷನ್ ಕೊಟ್ಟು ಶೇರ್ ಮಾಡಲಾದ ಈ ವಿಡಿಯೋ ವೈರಲ್ ಆಗಿದ್ದು ಸಾವಿರಾರು ವೀಕ್ಷಣೆಗಳನ್ನು ಕಂಡಿದೆ.
ʼಮಿಸ್ ಯೂನಿವರ್ಸ್ʼ ಹರ್ನಾಜ್ ಸಂಧು ಜೊತೆ ಸಂಭ್ರಮಿಸಿದ ಊರ್ವಶಿ ರೌಟೇಲಾ
ಲಘು ಹೊಂಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿರುವ ಮದುಮಗಳು, ವರ ಬಿಳಿ ಮತ್ತು ಹೊಂಬಣ್ಣದ ಶೇರ್ವಾನಿಯಲ್ಲಿ ಮಿಂಚುತ್ತಿರುವುದನ್ನು ನೋಡಬಹುದಾಗಿದೆ. ತನ್ನ ಕೈಗಳಲ್ಲಿ ಮದುಮಗಳ ಮೊಗವನ್ನು ಹಿಡಿದುಕೊಳ್ಳುವ ಮದುಮಗ, ಆಕೆಯೊಂದಿಗೆ ಆನಂದಭಾಷ್ಪದಲ್ಲಿ ಮಿಂದಿದ್ದಾನೆ.
ಈ ಮೇಡ್ ಫಾರ್ ಈಚದರ್ ಜೋಡಿ ಪರಸ್ಪರರ ಕಣ್ಣೀರನ್ನು ಒರೆಸುತ್ತಿರುವುದನ್ನು ಕಂಡ ನೆಟ್ಟಿಗರು, ಇಬ್ಬರ ಈ ಪ್ರೀತಿಗೆ ಮನಸೋತಿದ್ದಾರೆ. ಈ ರೊಮ್ಯಾಂಟಿಕ್ ಕ್ಷಣವನ್ನು ರೆಕಾರ್ಡ್ ಮಾಡುವಲ್ಲಿ ವೆಡ್ಡಿಂಗ್ ಛಾಯಾಗ್ರಾಹಕ ತಡ ಮಾಡದೇ ಎಲ್ಲವನ್ನೂ ಸೆರೆ ಹಿಡಿದಿದ್ದಾರೆ.
https://youtu.be/TVMgoGLwO-8