ರಾಜ್‌ಕೋಟ್: ಪಿಪಿಇ ಕಿಟ್ ಧರಿಸಿ ಹುಡುಗಿಯರು ಗುಜರಾತ್‌ನ ರಾಜಕೋಟದಲ್ಲಿ ಮಾಡಿರುವ ಜಾನಪದ ಗಾರ್ಬ ನೃತ್ಯ ಸಖತ್ ವೈರಲ್ ಆಗಿದೆ. ಕೋವಿಡ್ -19ನ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪಿಪಿಇ ಕಿಟ್ ಧರಿಸಿ ಜಾನಪದ ಹಾಡಿಗೆ ನೃತ್ಯ ಮಾಡಿದ್ದಾರೆ.
ನವರಾತ್ರಿ ಕಾರ್ಯಕ್ರಮದಲ್ಲಿ ಗುಂಪೊಂದು ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋದಲ್ಲಿ ಹುಡುಗಿಯರು ಪಿಪಿಇ ಕಿಟ್‌ಗಳು ಮತ್ತು ಮುಖವಾಡಗಳನ್ನು ಧರಿಸಿ ಜಾನಪದ ನೃತ್ಯವಾದ ಗಾರ್ಬವನ್ನು ಪ್ರದರ್ಶಿಸಿದ್ದಾರೆ. ಗಮನಾರ್ಹವಾಗಿ, ಗಾರ್ಬಾ ಎಂಬುದು ನವರಾತ್ರಿಯ ಸಮಯದಲ್ಲಿ ವಿಶೇಷವಾಗಿ ಗುಜರಾತ್‌ನಲ್ಲಿ ಪ್ರದರ್ಶಿಸಲಾದ ಭಾರತೀಯ ಜಾನಪದ ನೃತ್ಯವಾಗಿದೆ.
ಕೋವಿಡ್ -19 ರ ಅಪಾಯಗಳ ಬಗ್ಗೆ ಸಾಮಾನ್ಯ ಜನರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಇದಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, 21,000 ಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಜನರು ಈ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವರಾತ್ರಿಯ ಒಂಬತ್ತು ದಿನಗಳ ಧಾರ್ಮಿಕ ಹಬ್ಬವು ಗುಜರಾತ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಶರದ್ ನವರಾತ್ರಿ ಎಂದೂ ಕರೆಯಲ್ಪಡುವ ಈ ಹಬ್ಬವನ್ನು ಮಹಿಷಾಸುರ ರಾಕ್ಷಸನನ್ನು ದೇವಿ ದಮನ ಮಾಡುವ ವಿಜಯವನ್ನು ಸೂಚಿಸುತ್ತದೆ. ಇದು ಗುಜರಾತ್ ಸರ್ಕಾರವು ಗಾರ್ಬಾ ಕಾರ್ಯಕ್ರಮಗಳನ್ನು ಕೆಲವು ಮಾರ್ಗಸೂಚಿಗಳೊಂದಿಗೆ ಅನುಮತಿಸಿದೆ.