ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿಂದಲೂ ಎಲ್ಲರಿಗೂ ಸೆಲ್ಫಿ ಗೀಳು ಶುರುವಾಗಿರುವುದು ಸಾಮಾನ್ಯವಾಗಿದೆ. ವಿಶೇಷ ಸ್ಥಳಗಳಲ್ಲಿ ಅಥವಾ ಅಪಾಯಕಾರಿಯಾಗಿರುವಂತಹ ಸ್ಥಳಗಳಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ.
ಆದರೆ, ಒಂದು ಕ್ಷಣದ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೂ ಕಾರಣವಾಗಬಲ್ಲದು. ಆದರೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನಿಮಗೆ ನಗು ತರಿಸೋದಂತು ಸುಳ್ಳಲ್ಲ.
ಯುವತಿಯೊಬ್ಬಳು ಸೆಲ್ಫಿ ಕ್ಲಿಕ್ಕಿಸುವಲ್ಲಿ ಬ್ಯುಸಿಯಾಗಿದ್ದಾಳೆ. ಪಕ್ಕದಲ್ಲೇ ಕೆಸರು ನೀರು ಇದ್ದರೂ, ನೃತ್ಯ ಮಾಡುತ್ತಾ ಸೆಲ್ಫಿಯಲ್ಲಿ ಕ್ಲಿಕ್ಕಿಸಿದ್ದಾಳೆ. ಈ ವೇಳೆ ಕಾಲು ಜಾರಿ ಆಕೆ ಮಡ್ಡಿ ನೀರಿಗೆ ಬಿದ್ದಿದ್ದಾಳೆ. ಅದೃಷ್ಟವಶಾತ್ ನದಿ ಆಳವಿಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕೆಸರು ನೀರು ಆಗಿರುವುದರಿಂದ ಧರಿಸಿದ್ದ ಚೆಂದನೆಯ ಉಡುಪು ಹಾಳಾಗಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಸೆಲ್ಫಿ ಕ್ಲಿಕ್ಕಿಸುತ್ತಿದ್ದ ಯುವತಿಯು ನೀಲಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾಳೆ. ಆದರೆ, ಈ ರೀತಿ ಅಪಾಯಕಾರಿ ಸೆಲ್ಫಿ ಕ್ಲಿಕ್ಕಿಸುವ ಮುನ್ನ ಬಹಳಷ್ಚು ಜಾಗೃತೆ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯಕಟ್ಟಿಟ್ಟ ಬುತ್ತಿ.
https://www.youtube.com/watch?v=4DDbK5wTTx4