alex Certify ಕೋತಿಯನ್ನು ಗಾಬರಿಗೊಳಿಸಿದ ಸುಂದರ ಹುಡುಗಿಯ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿಯನ್ನು ಗಾಬರಿಗೊಳಿಸಿದ ಸುಂದರ ಹುಡುಗಿಯ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಫನ್ನಿ ವಿಡಿಯೋಗಳಿಗೇನು ಕೊರತೆಯೇ ಇಲ್ಲ. ನಿಮ್ಮ ಮುಖ ನೋಡಿ ಯಾರಾದರೂ ಭಯಗೊಂಡರೆ ನಿಮಗೆ ಹೇಗನಿಸುತ್ತದೆ ? ಅದರಲ್ಲೂ ಒಂದು ಪ್ರಾಣಿಯು ನಿಮಗೆ ಹೆದರಿದರೆ ಭಾವನೆ ಹತ್ತು ಪಟ್ಟು ಕೆಟ್ಟದಾಗಿರಬಹುದು.

ಸುಂದರ ಮಹಿಳೆಯ ಮುಖವು ತಣ್ಣಗೆ ಕುಳಿತಿದ್ದ ಕೋತಿಯನ್ನು ಗಾಬರಿ ಬೀಳಿಸಿರುವ ವಿಡಿಯೋ ನಕ್ಕು ನಲಿಸುತ್ತಿದೆ.

ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಅದು 23.7 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದ್ದು, 1.9 ಮಿಲಿಯನ್​ ಲೈಕ್​ ಪಡೆದು ವೈರಲ್​ ಆಗಿದೆ.

ಆ ವಿಡಿಯೋ ಕ್ಲಿಪ್​ನಲ್ಲಿ, ಹುಡುಗಿಯೊಬ್ಬಳು ಮೃಗಾಲಯಕ್ಕೆ ಭೇಟಿ ನೀಡಿದ್ದು, ಕೋತಿ ಆವರಣದಲ್ಲಿ ಕಿಟಕಿಯ ಮೇಲೆ ಕುಳಿತಿರುವ ಕೋತಿಗೆ ಹಲೋ ಹೇಳಲು ಪ್ರಯತ್ನಿಸಿದ್ದಾಳೆ. ಆ ಹುಡುಗಿ ಕಿಟಕಿಯ ಮೇಲೆ ಬಡಿಯುತ್ತಲೇ ಇದ್ದಾಗಲೂ ಕೋತಿ ಪ್ರತಿಕಿಯಿಸಲಿಲ್ಲ. ಆ ಕೋತಿ ಯಾವುದೋ ಆಳವಾದ ಆಲೋಚನೆಗಳಲ್ಲಿ ಕಳೆದುಹೋಗಿತ್ತು.

ಆದರೆ ಕೋತಿ ಒಮ್ಮೆಲೆ ತಿರುಗಿದಾಗ ಹುಡುಗಿಯ ಮುಖವು ಅದಕ್ಕೆ ಬಹಳ ಹತ್ತಿರದಲ್ಲಿತ್ತು, ಅದನ್ನು ಕಂಡು ಮಂಗವು ತುಂಬಾ ಭಯಭೀತವಾಗಿ ಕೆಳಗೆ ಬೀಳುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ನಗುವ ಎಮೋಜಿಗಳೊಂದಿಗೆ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...