
ನಟ ಸುದೀಪ್ ಅಭಿನಯದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಹಾಡು ನೀವು ನೋಡಿರಬಹುದು. ಇದರಲ್ಲಿ ನದಿಯ ಮಧ್ಯದಲ್ಲಿ ಉಯ್ಯಾಲೆ ಕಟ್ಟಿ ನಟಿಯನ್ನು ಕೂರಿಸಿ ನೃತ್ಯ ಮಾಡಿರುವ ದೃಶ್ಯವಿದೆ. ಇದ್ಯಾಕೆ ಹೇಳ್ತಿದ್ದೀವಿ ಅಂದ್ರೆ ಇದೇ ತರಹ ನದಿಯ ಮೇಲೆ ಉಯ್ಯಾಲೆಯಲ್ಲಿ ಕುಳಿತು ಡಿಫರೆಂಟ್ ಆಗಿ ಯುವತಿಯೊಬ್ಬಳು ಫೋಟೋಶೂಟ್ ಮಾಡಿಸೋಕೆ ಹೋಗಿದ್ದಾಳೆ. ಆದರೆ, ಆಗಿದ್ದು ಮಾತ್ರ ಬೇರೆ….. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಮಹಿಳೆಯೊಬ್ಬಳು ಸುಂದರವಾದ ಗುಲಾಬಿ ಬಣ್ಣದ ಉಡುಪು ತೊಟ್ಟು, ನದಿ ದಡದಲ್ಲಿ ಫೋಟೋಶೂಟ್ ಮಾಡಲು ತಯಾರಿ ನಡೆಸಿದ್ದಾಳೆ. ನೀರಿನ ಮೇಲೆ ಉಯ್ಯಾಲೆ ಕಟ್ಟಲಾಗಿದ್ದು, ಅದರ ಮೇಲೆ ಕುಳಿತು ಫೋಟೋಶೂಟ್ ಗೆ ಫೋಸ್ ಇನ್ನೇನು ಕೊಡಬೇಕು ಅನ್ನೋವಷ್ಟರಲ್ಲಿ ಧೊಪ್ಪನೆ ನೀರಿನ ಮೇಲೆ ಬಿದ್ದಿದ್ದಾಳೆ.
ನಾಲ್ಕು ಗಂಟೆಗಳಲ್ಲಿ 6,400 ಐಟಂ ಆಹಾರ ತಯಾರಿ: ವಿಡಿಯೋ ವೈರಲ್
ಫೋಟೋ ಕ್ಲಿಕ್ಕಿಸುವ ವೇಳೆ, ಮಹಿಳೆ ಧರಿಸಿರುವ ಉದ್ದನೆಯ ಉಡುಪನ್ನು ಗಾಳಿಯಲ್ಲಿ ತೇಲಿಸಲು ಹೋಗಿದ್ದಾರೆ. ಮಹಿಳೆ ಸ್ವಲ್ಪ ಧಡೂತಿಯಾಗಿದ್ದರಿಂದಲೋ ಏನೋ ಏಕಾಏಕಿ ಹಗ್ಗ ಕಟ್ಟಾಗಿದ್ದರಿಂದ ಆಕೆ ಉಯ್ಯಾಲೆ ಸಹಿತ ನೀರಿಗೆ ಬಿದ್ದಿದ್ದಾಳೆ. ಈ ರೀತಿಯ ಫೋಟೋಶೂಟ್ ಅಪಾಯವಾಗಿದ್ರೂ, ಅದೃಷ್ಟವಶಾತ್ ಮಹಿಳೆಗೆ ಯಾವುದೇ ಹಾನಿ ಸಂಭವಿಸಿಲ್ಲ. ನೀರಿಗೆ ಬಿದ್ದ ಕೂಡಲೇ ಸ್ವತಃ ಮಹಿಳೆ ಕೂಡ ಜೋರಾಗಿ ನಕ್ಕಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.
https://youtu.be/QLsi7LyYy5o