ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಹೆಣ್ಮಕ್ಳೇ ಸ್ಟ್ರಾಂಗ್ ಗುರೂ ಅನ್ನೋದು ಕೂಡ ಸುಳ್ಳಲ್ಲ. ಹೌದು, ಇಲ್ಲೊಬ್ಬಳು ಯುವತಿ ಮಾಡಿರುವ ಫ್ಲಿಪ್ ಕೌಶಲ್ಯ ಖಂಡಿತಾ ನಿಮ್ಮನ್ನು ಬೆರಗುಗೊಳಿಸುತ್ತದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯ ಫ್ಲಿಪ್ ಕೌಶಲ್ಯಕ್ಕೆ ನೆಟ್ಟಿಗರು ದಂಗಾಗಿದ್ದಾರೆ. ಯಾಕೆಂದ್ರೆ ಆಕೆ ಮಾಡಿದ್ದು, ಅಥ್ಲೆಟಿಕ್ ಉಡುಪು ಧರಿಸಿಯಲ್ಲ, ಬದಲಾಗಿ ಸ್ಕರ್ಟ್ ಹಾಗೂ ಹೈ ಹೀಲ್ಸ್ ಧರಿಸಿ ರಸ್ತೆಯಲ್ಲಿ ಪಲ್ಟಿ ಹೊಡೆದಿದ್ದಾಳೆ. ಯುವತಿಯನ್ನು ಪಾರುಲ್ ಅರೋರಾ ಎಂದು ಗುರುತಿಸಲಾಗಿದ್ದು, ಮೊನಚಾದ ಹೈ ಹೀಲ್ಸ್ ಹಾಗೂ ನೀಲಿ ಬಣ್ಣದ ಟಾಪ್ ಮತ್ತು ಗುಲಾಬಿ ಬಣ್ಣದ ಸ್ಕರ್ಟ್ ಧರಿಸಿ ರಸ್ತೆಯಲ್ಲಿ ಫ್ಲಿಪ್ ಪ್ರದರ್ಶಿಸಿದ್ದಾಳೆ.
ಪಾರುಲ್ ಯಶಸ್ವಿಯಾಗಿ ಮತ್ತು ಬಹಳ ಆತ್ಮವಿಶ್ವಾಸದಿಂದ ಫ್ಲಿಪ್ ಅನ್ನು ಪ್ರದರ್ಶಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ, ಪಾರುಲ್ ಫಿಟ್‌ನೆಸ್ ಮಾಡೆಲ್ ಆಗಿದ್ದಾರೆ. ಜೊತೆಗೆ ಜಿಮ್ನಾಸ್ಟ್ ನಲ್ಲಿ ರಾಷ್ಟ್ರೀಯ ಪದಕ ಗೆದ್ದಿದ್ದಾರೆ. ಈ ಹಿಂದೆಯೂ ಸಹ, ಅವರು ಸೀರೆಯಲ್ಲಿ ಫ್ಲಿಪ್ ಮಾಡುವ ಹಲವಾರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋ 251,830 ಲೈಕ್‌ಗಳನ್ನು ಗಳಿಸಿದೆ. ಅಲ್ಲದೆ ಯುವತಿಯ ದೃಢತೆ ಮತ್ತು ಪ್ರತಿಭೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.
https://www.youtube.com/watch?v=AmMHloR4ilE