ಒಂದು ವೇಳೆ ಮೊಸಳೆ ಏನಾದ್ರೂ ನಿಮ್ಮ ಬಳಿ ಬರುತ್ತಿರುವುದನ್ನು ಕಂಡ್ರೆ ಏನ್ಮಾಡುತ್ತೀರಾ..? ಅಯ್ಯಯ್ಯೋ ಬದುಕಿದೆಯಾ ಬಡ ಜೀವವೇ ಅಂತಾ ಎದ್ನೋ ಬಿದ್ನೋ ಅಂತಾ ಓಡುತ್ತೀರಾ ಅಲ್ವಾ..? ಆದರೆ, ಅಮೆರಿಕಾದ ಕ್ಯಾಲಿಫೋರ್ನೀಯಾದಲ್ಲಿರುವ ಸರೀಸೃಪ ಮೃಗಾಲಯದಲ್ಲಿರುವ ಸಿಬ್ಬಂದಿ ಯುವತಿಗೆ ಮೊಸಳೆ ಅಂದ್ರೆ ಒಂಚೂರು ಭಯವಿಲ್ಲ..!
ಹೌದು, ಮಹಿಳಾ ಸಿಬ್ಬಂದಿಯನ್ನು ದೈತ್ಯ ಮೊಸಳೆ ಬಿಗಿಯಾಗಿ ಅಪ್ಪಿಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಕೇರ್‌ಟೇಕರ್, ಡಾರ್ತ್ ಗೇಟರ್ ಎಂಬ ಹೆಸರಿನ ಸರೀಸೃಪವನ್ನು ವಿಡಿಯೋ ಮುಖಾಂತರ ಪರಿಚಯಿಸಿದ್ದಾಳೆ. ತನ್ನ ಜೀವನದಲ್ಲಿ ಮೊಸಳೆಯು ಸ್ನೇಹಿತನಾಗಿರುವುದಾಗಿ ಹೇಳಿದ್ದಾಳೆ.
ನುಸ್ರತ್ – ನಿಖಿಲ್ ನಡುವಿನ ವಿವಾಹ ಸಿಂಧುವಲ್ಲವೆಂದ ಕೋರ್ಟ್
ಆದರೆ ಆಘಾತಕಾರಿ ಸಂಗತಿಯೆಂದರೆ, ಮೊಸಳೆಯು ಸಿಬ್ಬಂದಿಯನ್ನು ಬಿಗಿಯಾಗಿ ತಬ್ಬಿಕೊಂಡಿರುವಾಗ ಆಕೆ ಮೊಸಳೆಯ ಕೆಳಗೆ ಮಲಗಿದ್ದಾಳೆ. ಕೆಲ ಹೊತ್ತಿನ ನಂತರ ಮೊಸಳೆ ಬದಿಗೆ ಸರಿದು ಅಲ್ಲಿಂದ ಹೋಗುತ್ತದೆ. ಈ ವೇಳೆ ಸರೀಸೃಪವು ಮಹಿಳೆಯ ಕಾಲಿನ ಬಳಿ ಮೂತ್ರ ವಿಸರ್ಜಿಸಿತ್ತು. ಇದನ್ನು ನೋಡಿದ ಆಕೆ ಜೋರಾಗಿ ನಗುತ್ತಾ, ಅಯ್ಯೋ ದೇವರೇ…. ಇದೇನಿದು ಅಂದಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋಗೆ 1.25 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಮೊಸಳೆಯು ತನ್ನನ್ನು ನೋಡಿಕೊಳ್ಳುವ ಸಿಬ್ಬಂದಿ ಜೊತೆಗಿನ ಮಧುರ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ.
https://www.youtube.com/watch?v=cgdSpaqicvc&feature=youtu.be