ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಲಾಟ್ ಒಂದರಲ್ಲಿ ನಡೆದ ಬೆಂಕಿ ಅವಘಡದಿಂದ ತಾಯಿ-ಮಗಳು ಸಜೀವ ದಹನವಾಗಿರುವ ದುರ್ಘಟನೆ ನಡೆದಿತ್ತು. ಇಂಥದ್ದೇ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಉರಿಯುತ್ತಿರುವ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ವೃದ್ಧ ವ್ಯಕ್ತಿಯನ್ನು ಮೂವರು ಸ್ನೇಹಿತರು ರಕ್ಷಿಸಿರುವ ರೋಚಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉರಿಯುತ್ತಿರುವ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ವೃದ್ಧ ವ್ಯಕ್ತಿಯನ್ನು ರಕ್ಷಿಸಲು ಮೂವರು ಸ್ನೇಹಿತರು ಕೂಡಲೇ ಕಾರ್ಯಾಚರಣೆಗಿಳಿದಿದ್ದಾರೆ. ಯಾವುದೇ ವೃತ್ತಿಪರ ತರಬೇತಿ ಅಥವಾ ಸುರಕ್ಷತಾ ಉಪಕರಣಗಳ ಬಳಕೆಯಿಲ್ಲದೆ ಇವರು ಕಟ್ಟಡವನ್ನು ಏರಿದ್ದಾರೆ.
ವರದಿಗಳ ಪ್ರಕಾರ, ಡೊಂಬೇವ್ ಡ್ಸಾಂಬುಲಾಟ್, ಔಲೌಬೇವ್ ಅಸ್ಲಾ ಮತ್ತು ಅಹ್ಮದೊವ್ ಮುಹ್ಸಿಂಜೊನ್ ಅವರು ಪಾರ್ಕ್‌ನಲ್ಲಿದ್ದಾಗ ವಯಸ್ಸಾದ ವ್ಯಕ್ತಿಯೊಬ್ಬರು ಉರಿಯುತ್ತಿರುವ ಕಟ್ಟಡದ 3 ನೇ ಮಹಡಿಯಲ್ಲಿ ಸಿಲುಕಿಕೊಂಡು ಗಾಬರಿಗೊಳ್ಳುತ್ತಿರುವುದನ್ನು ಗಮನಿಸಿದ್ದಾರೆ. ಯಾವುದೇ ಹಿಂಜರಿಕೆಯಿಲ್ಲದೆ, ಅವರು ಜ್ವಾಲೆಯ ಬಳಿ ಹೊಗೆಯ ರಭಸದಲ್ಲಿ ಉಸಿರುಗಟ್ಟುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ನೇಮಕಾತಿ: ಇನ್ಸ್‌ಪೆಕ್ಟರ್, ತೆರಿಗೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ವೃದ್ಧ ವ್ಯಕ್ತಿಯ ಪಾರ್ಶ್ವವಾಯುವಿಗೆ ಒಳಗಾಗಿದ್ದು ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರು. ಈ ವೇಳೆ ಒಬ್ಬಾತ ಅವರಿದ್ದ ಬಾಲ್ಕನಿಗೆ ಹಾರಿ ಅವರನ್ನು ಎಳೆದು ಪಕ್ಕದ ಬಾಲ್ಕನಿಯೊಳಗೆ ಸ್ಥಳಾಂತರಿಸುವ ಮೂಲಕ ರಕ್ಷಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.