ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ವಯಸ್ಕ ವ್ಯಕ್ತಿ ಕನಿಷ್ಠ ಎಂದರೂ ನಿತ್ಯ ಎಂಟರಿಂದ ಹತ್ತು ಸಾವಿರ ಹೆಜ್ಜೆಗಳನ್ನು ನಡೆಯುವುದು ಸೂಕ್ತವಾಗಿದೆ. ಆದರೆ ಬೆಳಿಗ್ಗೆ ಎದ್ದು ವಾಕ್ ಹೋಗಲು ಬಹುತೇಕರು ಸೋಮಾರಿತನ ಮಾಡುತ್ತಾರೆ.
ಆದರೂ ಕೂಡ ಗೆಳೆಯರು ಸೋಮಾರಿತನ ಮಾಡುವವರನ್ನು ಬಿಡದೆ ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಆ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸ್ನೇಹಿತರ ಆರೋಗ್ಯದ ಕುರಿತೂ ಕಾಳಜಿ ವಹಿಸುತ್ತಾರೆ. ಇದರ ಮಧ್ಯೆ ಬೆಳಿಗ್ಗೆ ವಾಕಿಂಗ್ ಹೋಗಲು ಕೆಲವರು ಕುಂಟು ನೆಪಗಳನ್ನು ಹೇಳುತ್ತಾರೆ.
ಹೀಗೆ ವಾಕಿಂಗ್ ಬರಲು ಹಿಂದೇಟು ಹಾಕುತ್ತಿದ್ದ ಸ್ನೇಹಿತನಿಗೆ ಆತನ ಗೆಳೆಯರು ಬೆಳ್ಳಂ ಬೆಳಗ್ಗೆ ಸರ್ಪ್ರೈಸ್ ನೀಡಿದ್ದಾರೆ. ವಾಲಗದ ಸಮೇತ ಸ್ನೇಹಿತನ ಮನೆ ಬಳಿ ಹೋಗಿದ್ದು, ಹೊರಬಂದ ಆತ ಗೆಳೆಯರ ಕೆಲಸ ಕಂಡು ಹೌಹಾರಿದ್ದಾರೆ. ಈ ತಮಾಷೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಾಜಿ ಸಚಿವ ಸುರೇಶ್ ಕುಮಾರ್ ಕೂಡ ಇದನ್ನು ಹಂಚಿಕೊಂಡಿದ್ದಾರೆ.
https://www.youtube.com/watch?v=170zHnSYoqY