ಮಥುರಾ (ಉತ್ತರ ಪ್ರದೇಶ): ಫುಡ್ಬ್ಲಾಗರ್ಗಳು ಇಂದು ಹೇರಳವಾಗಿದ್ದಾರೆ. ಹಲವು ವಿಶಿಷ್ಟ ಬಗೆಯ ಆಹಾರಗಳ ಬಗ್ಗೆ ಅದರಲ್ಲಿ ಪರಿಚಯಿಸಲಾಗುತ್ತದೆ. ಉತ್ತರ ಪ್ರದೇಶದ ಮಥುರಾದಲ್ಲಿನ ಫುಡ್ ಬ್ಲಾಗರ್ ಒಬ್ಬರು ಆಲೂಗಡ್ಡೆಯ ಪಲ್ಯದ ಜತೆ ಜಿಲೇಬಿ ತಿನ್ನುವ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಅಸಾಂಪ್ರದಾಯಿಕ ಖಾದ್ಯವನ್ನು ಮಥುರಾದ ಓಮಾ ಪೆಹಲ್ವಾನ್‌ನಲ್ಲಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಆಹಾರ ಬ್ಲಾಗರ್ ಪಾಲಕ್ ಕಪೂರ್ ಅವರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.
‘ಇದುವರೆಗಿನ ಅತ್ಯಂತ ವಿಲಕ್ಷಣವಾದ ಆಹಾರ ಸಂಯೋಜನೆ ಇದಾಗಿದೆ. ಆಲೂ ಕಿ ಸಬ್ಜಿಯೊಂದಿಗೆ ಜಿಲೇಬಿ ತಿನ್ನಲಾಗುತ್ತದೆ. ಇದು ಕೇಳಲು ಒಂದು ರೀತಿ ಎನಿಸಿದರೂ ತಿನ್ನಲು ಮಾತ್ರ ಬಹಳ ಸೂಪರ್ ಆಗಿದೆ. ಮಥುರಾದ ಬೃಂದಾವನ ಇದಕ್ಕೆ ಪ್ರಸಿದ್ಧವಾಗಿದೆʼ ಎಂದು ಅವರು ಬರೆದುಕೊಂಡಿದ್ದಾರೆ.
ತಾವು ಈ ಆಹಾರವನ್ನು ಸೇವಿಸಿದ ಕುರಿತು ಅನುಭವ ಹಂಚಿಕೊಂಡಿದ್ದಾರೆ ಪಾಲಕ್. ತಾವು ಇದನ್ನು ತಿಂದ ಬಳಿಕ ಅಲ್ಲಿಗೆ ಬಂದ ಯುವತಿಗೂ ತಿನ್ನುವಂತೆ ಮಾಡಿ ವಿಡಿಯೋ ತೆಗೆದಿದ್ದಾರೆ. ಈ ರೀಲ್ಸ್ ಇದಾಗಲೇ ಎರಡೂವರೆ ಲಕ್ಷದಷ್ಟು ವೀಕ್ಷಣೆ ಕಂಡಿದ್ದು, ಐದು ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.