alex Certify ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು.‌ ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ ವನ್ಯಜೀವಿ ಸಫಾರಿ ಪಾರ್ಕ್ ನಲ್ಲಿ ಇದರ ತದ್ವಿರುದ್ಧ ಘಟನೆ ನಡೆದಿದೆ. ಚಿರತೆಯೊಂದನ್ನು, ದಿಟ್ಟ ನಾಯಿ ದೈರ್ಯವಾಗಿ ಎದುರಿಸಿದೆ. ಸಧ್ಯ ಈ ದಿಟ್ಟ ನಾಯಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ನಡುರಸ್ತೆಯಲ್ಲಿಯೇ ನಾಯಿಯೊಂದು ಮಲಗಿರುವುದನ್ನು ನೀವು ಗಮನಿಸಬಹುದು. ಇದೇ ವೇಳೆ ಕಾಡಿನಿಂದ ರಸ್ತೆಗೆ ಎಂಟ್ರಿ ನೀಡಿರುವ ಚಿರತೆಯೊಂದು ಅಲ್ಲಿಗೆ ಬಂದು ನಾಯಿಯನ್ನು ಮೂಸಲು ಆರಂಭಿಸುತ್ತದೆ. ಇದರಿಂದ ಗಲಿಬಿಲಿಗೊಂಡ ನಾಯಿ ಒಮ್ಮೆಲೇ ಎದ್ದು ನಿಂತು ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ. ಇದರಿಂದ ಗಾಬರಿಗೊಂಡ ಚಿರತೆ ಹಿಂದೇಟು ಹಾಕಿ ಮರಳಿ ಅರಣ್ಯ ಸೇರುತ್ತದೆ.

Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಹಲವರು, ನಮ್ಮಲ್ಲಿ ನಮ್ಮನ್ನು ಕಾಪಾಡಿಕೊಳ್ಳುವ ಕ್ಷಮತೆ ಇದ್ದರೆ ಎಂತಾ ಕೆಟ್ಟ ಸಂದರ್ಭದಲ್ಲಿಯೂ ಬದುಕುಳಿಯಬಹುದು ಎಂದಿದ್ದಾರೆ.

ಕೆಲವರು ಈ ಕಾಳಗ ಕಾಡಿನಲ್ಲಿ ನಡೆದಿದ್ದರೆ ನಾಯಿಗೆ ಬೊಗಳುವ ಅವಕಾಶ ಸಿಗುತ್ತಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕೇವಲ ಬೊಗಳುವುದರ ಮೂಲಕ ಚಿರತೆಯನ್ನು ಹಿಮ್ಮೆಟ್ಟಿಸಿರುವ ನಾಯಿಯ ದೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ರಾಜಸ್ಥಾನದ ಜೈಪುರ ಝಲಾನಾ ಸಫಾರಿ ವನದಲ್ಲಿ ಪ್ರವಾಸಿಗರೊಬ್ಬರು ಈ ವಿಡಿಯೋ ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...