alex Certify ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು

ಪ್ರತಿಯೊಬ್ಬ ವಧು ತನ್ನ ಮದುವೆಗೆ ಸ್ಮರಣೀಯ ಮತ್ತು ಭವ್ಯವಾದ ಪ್ರವೇಶ ಮಾಡಲು ಇಷ್ಟಪಡುತ್ತಾರೆ. ಇದು ಆಕೆಯ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಿದೆ.

ವಧು ತಮ್ಮ ಮದುವೆಯ ದಿನದಂದು ನಾಚಿಕೆಯ ನೋಟವನ್ನು ಧರಿಸಿ ವರನಿಗಾಗಿ ಕಾಯುವ ದಿನಗಳು ಈಗಿಲ್ಲ. ಈಗ ಟ್ರೆಂಡ್ ಬದಲಾಗಿದೆ. ಸದ್ಯ, ವಧುವೊಬ್ಬಳ ಉಲ್ಲಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ವಧುವೊಬ್ಬಳು ಬಹಳ ಸಂತೋಷ, ಸಂಭ್ರಮದಿಂದ ತನ್ನ ವಿವಾಹದ ಸ್ಥಳಕ್ಕೆ ಕಾರು ಚಲಾಯಿಸುತ್ತಾ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈಕೆ ಬಹಳ ಉತ್ಸುಕಳಾಗಿದ್ದು, ಬಿಂದಾಸ್ ಆಗಿ ಕಾರು ಚಲಾಯಿಸಿದ್ದಾಳೆ.

ಪ್ರತಿ ದಿನ 50 ರೂ. ಉಳಿಸಿದ್ರೆ ಸಿಗಲಿದೆ 35 ಲಕ್ಷ ರೂ.

ಹೆಚ್ಚಿನ ವಧುಗಳು ಸಾಮಾನ್ಯವಾಗಿ ಮದುವೆಯ ದಿನದಂದು ಆತಂಕ ಮತ್ತು ಒತ್ತಡಕ್ಕೆ ಒಳಗಾಗಿದ್ದರೂ, ಈ ವಧು ಮಾತ್ರ ಆನಂದಿಸುತ್ತಿರುವುದನ್ನು ಕಾಣಬಹುದು. ವಧುವನ್ನು ಆಕ್ರಿಟಿ ಸೇಥಿ ಎಂದು ಗುರುತಿಸಲಾಗಿದೆ. ಕೆಂಪು ಬಣ್ಣದ ಲೆಹೆಂಗಾ ಮತ್ತು ಭಾರಿ ಆಭರಣಗಳನ್ನು ಧರಿಸಿರುವ ವಧು  ಕಾರು ಚಲಾಯಿಸಿದ್ದಾಳೆ.

ಆಕ್ರಿಟಿಯ ಮೇಕಪ್ ಆರ್ಟಿಸ್ಟ್ ಪಾರುಲ್ ಗರ್ಗ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಒಬ್ಬ ಬಳಕೆದಾರ ಸುಂದರ ವಧು ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬಾತ ವ್ಹಾವ್ ಅದ್ಭುತ ಎಂದು ಉದ್ಘರಿಸಿದ್ದಾರೆ.

https://youtu.be/t4fx1sInug0

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...