ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಅಥವಾ ಯಾರೊಬ್ಬರ ಬಾರಾತ್‌ನಲ್ಲಿ ನೃತ್ಯ ಮಾಡುವಾಗ ನಾಗಿನ್ ಡಾನ್ಸ್ ಮಾಡುವುದು ಇತ್ತೀಚಿನ ಟ್ರೆಂಡ್ ಆಗಿದೆ. ಕೆಲವರು ತಮ್ಮ ಮೈಮೇಲೆ ನಿಜವಾಗಿಯೂ ಹಾವು ಬಂದಿತು ಎಂಬಂತೆ ನೃತ್ಯ ಮಾಡುತ್ತಾರೆ.
ಅಂಥದ್ದೇ ಒಂದು ನೃತ್ಯ ಸಾಮಾಜಿಕ ಜಾಲತಾಣದಲ್ಲಿ ನಗುವಿನ ಅಲೆಯನ್ನೇ ಹೊತ್ತು ತಂದಿದೆ.
ಯಾರೋ ಒಬ್ಬರ ಪಾರ್ಟಿಯಲ್ಲಿ ಅಜ್ಜನೊಬ್ಬ ನಾಗಿನ್ ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಡಿಜೆ ಪುಂಗಿ ಟ್ಯೂನ್ ನುಡಿಸುತ್ತಿದ್ದಂತೆ, ಅಜ್ಜ ಮತ್ತು ಅವನ ಸ್ನೇಹಿತ ಡ್ಯಾನ್ಸ್ ಫ್ಲೋರ್ ಮೇಲೇರಿ ಹಾವಿನಂತೆ ನರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆದರೆ ಅಸಲಿಗೆ ಈತ ಮಾಡುತ್ತಿರುವುದು ಹಾವಿನ ನೃತ್ಯವೋ ಇಲ್ಲವೇ ಕಪ್ಪೆ ನೃತ್ಯವೋ ತಿಳಿಯುತ್ತಿಲ್ಲ. ಏಕೆಂದರೆ ಕಪ್ಪೆಯಂತೆ ಜಿಗಿದು ಜಿಗಿದು ನರ್ತಿಸುತ್ತಿರುವುದನ್ನು ನೋಡಬಹುದಾಗಿದೆ. ‘JaikyYadav16’ ಬಳಕೆದಾರರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಇದೀಗ 3.44 ಲಕ್ಷ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಮನಸಾರೆ ನಗುತ್ತಿದ್ದಾರೆ.
https://twitter.com/JaikyYadav16/status/1589507962833604609?ref_src=twsrc%5Etfw%7Ctwcamp%5Etweetembed%7Ctwterm%5E1589507962833604609%7Ctwgr%5E4a67d3eca9904ee65beede971ab797c39d63ddf8%7Ctwcon%5Es1_&ref_url=https%3A%2F%2Fwww.indi