ವೃದ್ಧಾಪ್ಯದಲ್ಲಿ ತಮ್ಮ ಆಸೆಗಳನ್ನು ಈಡೇರಿಸಲು ಹಲವು ಹಿರಿಯ ಜೀವಗಳು ಬಯಸುತ್ತವೆ. ಆದರೆ ಯಾವ್ಯಾವುದೋ ಕಾರಣಗಳಿಗೆ ಅವರ ಆಸೆ ಈಡೇರುವುದೇ ಇಲ್ಲ. ಆದರೆ ಮಹಾರಾಷ್ಟ್ರದ ದಂಪತಿ ಮಾತ್ರ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ವಿಶ್ವದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಸಮೀಪದಿಂದ ನೋಡುವ ಜೀವಮಾನದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಆಂಡಿ ಥಾಪಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವೃದ್ಧ ದಂಪತಿ, ಪರ್ವತದ ಮೇಲೆ ಹತ್ತುವುದನ್ನು ಕಾಣಬಹುದು. ಮಹಿಳೆ ತನ್ನ ಪತಿಗೆ ಸಹಾಯ ಮಾಡುತ್ತಾರೆ, ಸುಮಾರು 85 ವರ್ಷದ ಪತಿ ವಾಕಿಂಗ್ ಸ್ಟಿಕ್ ಅನ್ನು ಹಿಡಿದಿರುವುದನ್ನು ನೋಡಬಹುದು. ಇಬ್ಬರೂ ಎವರೆಸ್ಟ್‌ನತ್ತ ಕಣ್ಣು ತುಂಬಿ ಪ್ರೀತಿಯಿಂದ ನೋಡುತ್ತಾರೆ, ಕನಸು ನನಸಾಗುತ್ತಿದೆ ಎಂದು ತೋರುತ್ತದೆ.
ಅಕ್ಟೋಬರ್ 16 ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಮತ್ತು ಅಂದಿನಿಂದ ಇದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 24 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ.
“ನಿಮ್ಮ ಕನಸುಗಳನ್ನು ಬೆನ್ನಟ್ಟಿ ಹೋಗಿ! ಇದು ಎಂದಿಗೂ ತಡವಾಗಿಲ್ಲ. ಈ ವೀಡಿಯೊ ಪರಿಪೂರ್ಣ ಉದಾಹರಣೆಯಾಗಿದೆ” ಎಂದು ಕಮೆಂಟಿಗರು ಹೇಳುತ್ತಿದ್ದಾರೆ.