
ಉತ್ತರ ಗೋವಾದ ರಸ್ತೆಯಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಪ್ರವಾಸಿಗನೊಬ್ಬ ಕಾರ್ ಗೆ ಡಿಕ್ಕಿ ಹೊಡೆದಿದ್ದು ಇದನ್ನು ಪ್ರಶ್ನಿಸಿದ ವೇಳೆ ರಸ್ತೆಯಲ್ಲೇ ಸಂಗೀತ ಹಾಕಿ ನೃತ್ಯ ಮಾಡಿದ್ದಾನೆ. ಸಿಯೋಲಿಮ್ ಪ್ರದೇಶದಲ್ಲಿ ಕುಡಿದ ಮತ್ತಲ್ಲಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಚಾಲಕನೊಬ್ಬ ಆತನನ್ನು ತಡೆದು ಪ್ರಶ್ನಿಸಿದ್ದಾರೆ.
ಪ್ರವಾಸಿಗನ ಕಾರ್ ಡಿಕ್ಕಿ ಹೊಡೆದ ಪರಿಣಾಮ ತನ್ನ ಬಾಡಿಗೆ ಕಾರು ಮತ್ತೊಬ್ಬ ವ್ಯಕ್ತಿಯ ವಾಹನಕ್ಕೆ ಡಿಕ್ಕಿ ಹೊಡೆದು ಅದನ್ನು ಹಾನಿಗೊಳಿಸಿದ್ದರಿಂದ ಚಾಲಕ ಕೋಪಗೊಂಡು ಪ್ರಶ್ನಿಸಿದ್ದಾರೆ.
ಈ ವೇಳೆ ತನ್ನ ತಪ್ಪಿನ ಬಗ್ಗೆ ಯಾವುದೇ ವಿಷಾದವಿಲ್ಲದೆ, ಮುಂಬೈ ನಿವಾಸಿ ಎಂದು ಹೇಳಲಾದ ಪ್ರವಾಸಿ ತುಷಾರ್ ರಸ್ತೆಯಲ್ಲಿ ಸಂಗೀತ ಹಾಕಿ ನೃತ್ಯ ಮಾಡಿದ್ದಾನೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.