
ತಾಯಿಯು ತನ್ನ ಪುಟ್ಟ ಕಂದನಿಗೆ ಅಮ್ಮ ಎಂದು ಹೇಳಲು ಪ್ರಯತ್ನಿಸಿದ್ದಾಳೆ. ಅಮ್ಮ ಅಂತಾ ಹೇಳಿದ್ರೆ ಆಹಾರ ಕೊಡುವುದಾಗಿ ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಅಮ್ಮ ಎಂದು ಹೇಳಲು ಪ್ರೋತ್ಸಾಹಿಸುವುದಕ್ಕಾಗಿ ಮಗುವಿಗೆ ಆಹಾರ ನೀಡುತ್ತಾರೆ.
ಆದರೆ, ಮಗುವಿನ ಜೊತೆ ಸಾಕು ನಾಯಿ ಕೂಡ ನಿಂತಿದೆ. ಪೋಷಕರು ಮಾಮಾ ಹೇಳು ಅಂತಾ ಮಗುವಿಗೆ ಹೇಳಿದ್ರೆ, ನಾಯಿ ಮೊದಲಿಗೆ ಹೇಳುತ್ತದೆ. ಇದರಿಂದ ಪೋಷಕರು ನಗೆಗಡಲಲ್ಲಿ ತೇಲಿದ್ದಾರೆ. ಮಗುವಿನ ತಂದೆ-ತಾಯಿ, ಅಮ್ಮ ಎಂದು ಹೇಳು ಅಂತಾ ಪ್ರಯತ್ನಪಡುತ್ತಿದ್ರೆ, ನಾಯಿ ಮೊದಲಿಗೆ ಹೇಳುವುದನ್ನು ನೋಡಿ ಅವರಿಗೆ ನಗು ತಡೆಯಲಾಗಲಿಲ್ಲ.
ಅಂಧ ಬಾಲಕನ ರಾಜ್ಯ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…!
ಈ ವಿಡಿಯೋವನ್ನು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರ್ನಲ್ಲಿ ಸಖತ್ ವೈರಲ್ ಆಗಿದೆ. 2.78 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ನಾಯಿಗೆ ಬಹುಮಾನವಾಗಿ ಆಹಾರ ನೀಡಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ನಾಯಿ ತುಂಬಾ ಸ್ಮಾರ್ಟ್ ಆಗಿದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.