
ಮನುಷ್ಯನ ಬೆಸ್ಟ್ ಫ್ರೆಂಡ್ ಎಂದರೆ ’ನಾಯಿ’. ಇದರಲ್ಲಿ ಬಹುತೇಕರಿಗೆ ಸಂಶಯವೇ ಇಲ್ಲ. ಹಾಗಾಗಿಯೇ ಜಗತ್ತಿನಲ್ಲಿ ಸಾಕುಪ್ರಾಣಿಗಳ ಪೈಕಿ ಅತಿಹೆಚ್ಚು ಇರುವುದು ನಾಯಿಗಳೇ. ಆದರೆ ಅವುಗಳಿಗೆ ವಿಶೇಷ ವಾಸನೆ ಗ್ರಹಣ ಶಕ್ತಿ, ಅಪಾಯಗಳ ಸುಳಿವಿನಂತಹ ಗುಣಲಕ್ಷ ಣಗಳು ಇರುವುದನ್ನು ನೀವು ಗಮನಿಸಿರುತ್ತೀರ.
ಸಾಕು ನಾಯಿಯು ಮನೆಯ ಹೊರಗಡೆ ಇರಲಿ ಅಥವಾ ಒಳಗಡೆ ಇರಲಿ, ಸದಾಕಾಲ ಜಾಗೃತವಾಗಿರುತ್ತದೆ.
ಮನೆಯಲ್ಲಿರುವ ತನ್ನ ಮಾಲೀಕನ ಕುಟುಂಬದವರು ಸುರಕ್ಷಿತವಾಗಿದ್ದಾರೆಯೇ ಎಂದು ಮಲಗಿದಲ್ಲಿಯೇ ಗಮನಿಸುತ್ತಿರುತ್ತದೆ. ಇಲ್ಲವೇ, ಮನೆಯಲ್ಲಿ ಸುಮ್ಮನೆ ಸುತ್ತಾಡಿ, ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುತ್ತದೆ. ಅಂಥ ದೃಶ್ಯವೊಂದು ರಾತ್ರಿ ವೇಳೆಯಲ್ಲಿ ಮನೆಯೊಳಗಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲ್ಲಿರೊಟ್ಟಿಟ್ ಎನ್ನುವವರು ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದು, ನೆಟ್ಟಿಗರು ನಾಯಿಯ ಕಾಳಜಿಗೆ ಮಾರು ಹೋಗಿ ಮೆಚ್ಚುಗೆ ಮಹಾಪೂರವನ್ನೇ ಹರಿಸಿದ್ದಾರೆ.
ಕಿಲ್ಲಿಯನ್ ಎಂಬ ನಾಯಿ ರಾತ್ರಿ ಸೀದಾ ಮೊದಲು ಹೋಗುವುದು ಮನೆಯ ಅತ್ಯಂತ ಕಿರಿಯ ಸದಸ್ಯನಾದ ಶಿಶುವೊಂದು ಮಲಗಿರುವ ಕೋಣೆಗೆ. ಅಲ್ಲಿ ಎಲ್ಲವೂ ಸರಿಯಿದೆ ಎಂದು ಖಾತ್ರಿಯಾದ ಮೇಲೆ ಅದು, ಮತ್ತೆ ಇಬ್ಬರು ಮಕ್ಕಳು ಮಲಗಿರುವ ಕೋಣೆಗೆ ಬರುತ್ತದೆ. ಮಕ್ಕಳು ಹೊದಿಕೆ ಹೊದ್ದುಕೊಂಡಿರುವುದನ್ನು ಕೂಡ ಅವರ ಹತ್ತಿರಕ್ಕೆ ಹೋಗಿ ಗ್ಯಾರಂಟಿ ಪಡಿಸಿಕೊಂಡು ಆಮೇಲೆ ಹಿಂದಿರುಗುತ್ತದೆ. ನೋಡಿ, ಸಾಕುನಾಯಿಯ ಈ ತಾಯಿಯಂತಹ ಕಾಳಜಿ, ತಂದೆಯಂತಹ ನಿಗಾಕ್ಕೆ ಏನು ಹೇಳೋಣ ಅಂತ ಮೂಕಸ್ತಬ್ಧರಾಗಿ ಆನಂದಬಾಷ್ಪ ಸುರಿಸಿದ್ದಾರೆ ಕೆಲ್ಲಿ ಅವರು.
https://www.youtube.com/watch?v=lRAfYX0ssto&feature=youtu.be