ವಯಸ್ಸು ಎಂಬುದು ಒಂದು ಸಂಖ್ಯೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಹಿರಿಯರ ಜೀವನ ಪ್ರೀತಿ ತೋರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದ್ದೀಗ ಅಂತಹುದೇ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಖಾಲಿ ಇರುವ ಮನೆ ಒಂದರಲ್ಲಿ ಎಂಟತ್ತು ಜನ ಹಿರಿಯರು ಸೇರಿಕೊಂಡಿದ್ದಾರೆ. ಬಹುಶಃ ಕುಟುಂಬ ಸದಸ್ಯರೆಲ್ಲರೂ ಊರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ಅವರು ಅಲ್ಲಿ ಸೇರಿಕೊಂಡಿದ್ದರು ಎಂದು ಕಾಣಿಸುತ್ತದೆ. ಪಾರ್ಟಿ ಅಂದ ಮೇಲೆ ಅಲ್ಲಿ ಡ್ಯಾನ್ಸ್ ಇರದಿದ್ದರೆ ಹೇಗೆ ? ಇವರುಗಳು ಅದಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ.
ಪಾರ್ಟಿಗಳಲ್ಲಿ ಡಾನ್ಸ್ ಗೆ ಕಾಯಂ ಹಾಡು ಎಂದೇ ಪರಿಗಣಿಸಲ್ಪಟ್ಟಿರುವ ನಾಗಿನ್ ನೃತ್ಯವನ್ನು ಇವರು ಆಯ್ದುಕೊಂಡಿದ್ದು, ಓರ್ವ ತಮ್ಮ ಕರ್ಚಿಫನ್ನೇ ಪುಂಗಿಯಂತೆ ಹಿಡಿದುಕೊಂಡು ತಲೆಯಾಡಿಸುತ್ತಿದ್ದರೆ ಉಳಿದವರು, ಹಾವಿನಂತೆ ಡಾನ್ಸ್ ಮಾಡಿದ್ದಾರೆ.
https://twitter.com/umda_panktiyan/status/1575801174221287424?ref_src=twsrc%5Etfw%7Ctwcamp%5Etweetembed%7Ctwterm%5E1575801174221287424%7Ctwgr%5E20330696e04d458fbc9ff2d490fc669e824bea11%7Ctwcon%5Es1_&ref_url=https%3A%2F%2Fm.d