ಸೋಶಿಯಲ್ ಮೀಡಿಯಾದಲ್ಲಿ ನಾವೆಲ್ಲರೂ ಕಳೆದು ಹೋಗಿದ್ದೇವೆ. ಎಷ್ಟೆ ಕೆಲಸದ ಒತ್ತಡ ಇರಲಿ ಒಂದೆರಡು ನಿಮಿಷ ಸಿಕ್ಕರೆ ಸಾಕು ರಿಲ್ಯಾಕ್ಸ್ ಆಗುವುದಕ್ಕೊಸ್ಕರ ನಾವು ಸೋಶಿಯಲ್ ಮೀಡಿಯಾ ಲೋಕದಲ್ಲಿ ಒಂದು ಸುತ್ತು ಹೊಡೆದು ಬಂದ್ಬಿಡ್ತೇವೆ. ಆಗ ನಮಗೆ ಈ ಕೆಲ ಶಾಕಿಂಗ್ ವಿಡಿಯೋ ಗಮನಕ್ಕೆ ಬಂದರೆ ಇನ್ನೂ ಕೆಲ ವಿಡಿಯೋಗಳು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸೋ ವಿಡಿಯೋಗಳು ಕಣ್ಣಿಗೆ ಬೀಳುತ್ತೆ ಅಂತಹ ವಿಡಿಯೋಗಳಲ್ಲಿ ಈ ವಿಡಿಯೋ ಕೂಡಾ ಒಂದು.
ಇಲ್ಲಿ ಈ ಹಳ್ಳಿಪೋರ ಏನು ಮಾಡ್ತಿದ್ದಾನೆ ಅಂತ ನೋಡಿದ್ರೆ, ಎಲ್ಲರೂ ಶಾಕ್ ಆಗಿ ನಕ್ಕು ಬಿಡೋದಂತೂ ಗ್ಯಾರಂಟಿ.
‘grouprst.official’ ಅನ್ನುವ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಅದಕ್ಕೆ ‘ ಹೇ ತೇರಿ ಝುಲ್ಫೈ ಉಫ್‘( ಹೇ ನಿನ್ನ ಸುಂದರ ಕೇಶರಾಶಿ‘) ಅನ್ನೋ ಶೀರ್ಷಿಕೆ ಕೊಡಲಾಗಿದೆ.
ಇಲ್ಲಿ ಈ ಪುಟ್ಟ ಪೋರ ಕಂದು ಬಣ್ಣದ ಕೂದಲನ್ನ ತೋರಿಸಿ, ಇದು ನೋಡಿ ನನ್ನ ಅದ್ಭುತ ಕೇಶ ರಾಶಿ ಅನ್ನುವ ರೀತಿಯಲ್ಲಿ ಕೂದಲನ್ನು ತೋರಿಸಿ ಬೆರಳಿನಿಂದ ಬಾಚಿಕೊಳ್ಳುತ್ತಿರುವುದನ್ನ ನೋಡಬಹುದು. ಅಲ್ಲಿಯ ತನಕ ಆತನ ಮುಖ ಮತ್ತು ಆತನ ಕೂದಲು ಮಾತ್ರ ಕಾಣಿಸುತ್ತಿರುತ್ತೆ. ಯಾವಾಗ ಕ್ಯಾಮರಾ ಔಟ್ ಆಫ್ ಫೋಕಸ್ ಹೋಗುತ್ತೋ ಆತನ ಕೂದಲಿನ ರಹಸ್ಯ ಬಯಲಾಗಿ ಬಿಡುತ್ತೆ.
ಅಸಲಿಗೆ ಅದು ಎಮ್ಮೆಯ ಬಾಲದ ತುದಿಯಲ್ಲಿರುವ ಕೂದಲಾಗಿರುತ್ತೆ. ಆ ವಿಡಿಯೋದ ಅಂತ್ಯದಲ್ಲಿ ಈ ರೀತಿಯ ಟ್ವಿಸ್ಟ್ ಇರಬಹುದು ಅನ್ನೋ ಅಂದಾಜು ಕೂಡಾ ಯಾರೂ ಕೂಡಾ ಮಾಡಿರಲಿಕ್ಕಿಲ್ಲ ಈ ವಿಡಿಯೋ ಈಗಾಗಲೇ 8.5 ಮಿಲಿಯನ್ ವೀಕ್ಷಣೆಯನ್ನ ಪಡೆದಿದೆ. ಮತ್ತು 257k ಲೈಕ್‌ಗಳನ್ನು ಪಡೆದಿದೆ.
https://www.youtube.com/watch?v=dJ2Mp8ooMv4