ಡಾನ್ಸ್ ವೀಡಿಯೊಗಳು ಇನ್ಸ್ಟಾಗ್ರಾಂನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಗಳಿಸುತ್ತವೆ, ಅದಕ್ಕಾಗಿಯೇ ಜನರು ಇತ್ತೀಚಿನ ದಿನಗಳಲ್ಲಿ ನೃತ್ಯ ಪ್ರದರ್ಶನ ಹೆಚ್ಚಾಗಿ ನೀಡುತ್ತಿದ್ದಾರೆ. ಹುಚ್ಚುಚ್ಚಾಗಿ ನೃತ್ಯ ಮಾಡಿದರೆ ಹೆಚ್ಚೆಚ್ಚು ಲೈಕ್ಸ್ ಪಡೆಯುವುದೂ ಇದೆ. ಆದರೆ ಇಲ್ಲೊಬ್ಬ ಯುವಕ, ಬಾಲಿವುಡ್ ಹಾಡಿಗೆ ನೃತ್ಯ ಮಾಡಿ ಸಕತ್ ವೈರಲ್ ಆಗಿದ್ದಾನೆ.
ಬರ್ಸೋ ರೇ, ಚಮ್ ಚಮ್ ಚಾಮ್, ಮತ್ತು ಟಿಪ್ ಟಿಪ್ ಬರ್ಸಾ ಪಾನಿಯಂತಹ ಜನಪ್ರಿಯ ಬಾಲಿವುಡ್ ಹಾಡುಗಳಿಗೆ ದೇಸಿ ಹುಡುಗಿಯರು ಸಾಮಾನ್ಯವಾಗಿ ಮಳೆಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು. ಇದೀಗ, ಯುವಕನೊಬ್ಬ ಇದೇ ರೀತಿಯ ರೀಲ್‌ನಲ್ಲಿ ರಸ್ತೆಯೊಂದರಲ್ಲಿ ಮಳೆಯಲ್ಲಿ ಡಾನ್ಸ್ ಮಾಡಿದ್ದು ಅದೀಗ ವೈರಲ್ ಆಗಿದೆ.
ಮುಂಬೈನಲ್ಲಿ ವಾಸಿಸುತ್ತಿರುವ ವೈಭವ ದೀಕ್ಷಿತ್ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಕುರುಕ್ಷೇತ್ರ ಚಿತ್ರದ ‘ಬನ್ ಥನ್ ಚಲಿ ಬೋಲೋ ಏ ಜಾತಿ ರೇ ಜಾತಿ ರೇ’ ಹಾಡಿಗೆ ಮುಂಬೈನ ರಸ್ತೆಯೊಂದರಲ್ಲಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಮಳೆ ಸುರಿಯುತ್ತಿರುವಾಗ, ಜನರು ಛತ್ರಿ ಹಿಡಿದು ಹೋಗುತ್ತಿರುವಾಗಿ ವೈಭವ್ ಸುಂದರ ನೃತ್ಯ ಮಾಡಿದ್ದು, ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾನೆ, ಈತನ ನೃತ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.