alex Certify ‘ಲೇಜಿ ಲಾಡ್’ಗೆ ಕುಣಿದು ಕುಪ್ಪಳಿಸಿದ ಮಹಿಳೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲೇಜಿ ಲಾಡ್’ಗೆ ಕುಣಿದು ಕುಪ್ಪಳಿಸಿದ ಮಹಿಳೆ: ವಿಡಿಯೋ ವೈರಲ್

ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿದ್ದಾರೆ. ಇದೀಗ ಹಲವಾರು ಸಾಮಾಜಿಕ ಮಾಧ್ಯಮಗಳು ಇರೋದ್ರಿಂದ ಈ ಮೂಲಕ ಉತ್ತಮ ಪ್ರತಿಭೆಗಳು ಹೊರಬರುತ್ತಿವೆ. ಇದೀಗ ಲೇಜಿ ಲಾಡ್ ಹಾಡಿಗೆ ಮಹಿಳೆಯೊಬ್ಬರು ನರ್ತಿಸಿರುವ ವಿಡಿಯೋ ಆನ್ಲೈನ್ ನಲ್ಲಿ ಭಾರಿ ವೈರಲ್ ಆಗಿದೆ.

ವಿಡಿಯೋದಲ್ಲಿನ ಮಹಿಳೆಯನ್ನು ಪೂನಮ್ ಸುಶನ್ ಎಂದು ಗುರುತಿಸಲಾಗಿದೆ. ಅವರು ಲೇಜಿ ಲಾಡ್ ಹಾಡಿಗೆ ಬಲು ಉತ್ಸಾಹ, ಆನಂದದಿಂದ ನೃತ್ಯ ಮಾಡಿದ್ದಾರೆ. ಅವರ ಇನ್ಸ್ಟಾಗ್ರಾಂನಲ್ಲಿನ ಬಯೋ ಪ್ರಕಾರ ಪುನಮ್ ಅವರು, ಕಥಕ್ ನೃತ್ಯಗಾರ್ತಿಯಾಗಿದ್ದು, 41.4k ಅನುಯಾಯಿಗಳನ್ನು ಹೊಂದಿದ್ದಾರೆ.

ಲೇಜಿ ಲಾಡ್ ಹಾಡು, 2013 ರ ಇಮ್ರಾನ್ ಹಶ್ಮಿ ಮತ್ತು ವಿದ್ಯಾ ಬಾಲನ್ ಅಭಿನಯದ ಘಂಚಕ್ಕರ್ ಚಲನಚಿತ್ರದದ್ದಾಗಿದೆ. ಸದ್ಯ, ಪೂನಮ್ ಮಾಡಿರುವ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ನೃತ್ಯವನ್ನು ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗವನ್ನು ಪ್ರೀತಿ, ಮತ್ತು ಹೃದಯದ ಎಮೋಜಿಗಳೊಂದಿಗೆ ತುಂಬಿದ್ದಾರೆ. ಅಲ್ಲದೆ ಪೂನಮ್ ಅವರ ಉತ್ಸಾಹಭರಿತ ನೃತ್ಯಕ್ಕೆ ಮನಸೋತಿದ್ದಾರೆ.

https://www.youtube.com/watch?v=HadCvXl3fr4

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...