ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯ. ಊಟ-ತಿಂಡಿ ಕೊಳ್ಳಲು ಶಕ್ತರಲ್ಲದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಊಟ ನೀಡುವುದು ಸಹ ಅಷ್ಟೇ ಪುಣ್ಯದ ಕೆಲಸ. ದೆಹಲಿಯ ಉಪಾಹಾರ ಗೃಹವೊಂದು ಕೈಗೆಟಕುವ ಬೆಲೆಯಲ್ಲಿ ಜನರಿಗೆ ಆಹಾರವನ್ನು ನೀಡುತ್ತಿದೆ. ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ದೆಹಲಿಯ ರೋಹಿಣಿಯಲ್ಲಿರುವ ಸೀತಾ ಜೀ ಕಿ ರಸೋಯಿ ಕನಿಷ್ಠ 10 ರೂಪಾಯಿಗೆ ಥಾಲಿಗಳನ್ನು ಮಾರಾಟ ಮಾಡುತ್ತಿದ್ದು, ಇದಕ್ಕೆ ಗ್ರಾಂಥ್ ಟ್ರಸ್ಟ್ ಮತ್ತು ಫೌಂಡೇಶನ್ ಬೆನ್ನೆಲುಬಾಗಿ ನಿಂತಿದೆ. ಗ್ರಾಂಥ್ ಫೌಂಡೇಶನ್ ಮೂಲಕ ಸೀತಾ ಜಿ ಕೆ ರಸೋಯಿಯವರು ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಕೇವಲ ಹತ್ತುರೂಪಾಯಿಗೆ ಅನ್ಲಿಮಿಟೆಡ್ ಊಟವನ್ನ ಒದಗಿಸುತ್ತಿದ್ದಾರೆ. ಅದನ್ನು ಪಾವತಿಸಲು ಸಾಧ್ಯವಾಗದಿದ್ದವರಿಗೆ ಉಚಿತವಾಗಿ ಎಷ್ಟು ಬೇಕೋ ಅಷ್ಟು ಆಹಾರ ನೀಡಿ ಹಸಿದ ಹೊಟ್ಟೆಗಳನ್ನ ತುಂಬಿಸುತ್ತಿದ್ದಾರೆ.
ಸೀತಾ ಜೀ ಕಿ ರಸೋಯಿಯ ವಿಡಿಯೋವನ್ನ ಫುಡ್ ಬ್ಲಾಗರ್ ಒಬ್ಬರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು, ಜೊತೆಗೆ ಇಲ್ಲಿ ಕಡಿಮೆ ಬೆಲೆಗೆ ಮಾತ್ರವಲ್ಲ, ಅಸಹಾಯಕರಿಗೆ, ಅನಾಥರಿಗೆ ಉಚಿತವಾಗಿ ಊಟ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಸಧ್ಯ ಈ ವಿಡಿಯೋ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 4.2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು ಗ್ರಾಂಥ್ ಹಾಗೂ ಸೀತಾ ಜೀ ಕಿ ರಸೋಯಿಯ ಮಾಲೀಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.
https://youtu.be/nJ7yD1225tk