ಪಿಕ್‌ಪಾಕೆಟ್, ಮೊಬೈಲ್ ಫೋನ್ ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಇಂತಹ ಅಪರಾಧಗಳು ಮಹಾನಗರಗಳು ಮತ್ತು ರೈಲುಗಳಲ್ಲಿ ಸಹಜವಾಗಿದೆ.
ಕೆಲ ಕಳ್ಳರು ದೋಚುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಕದ್ದ ಫೋನ್, ಚಿನ್ನಾಭರಣಗಳನ್ನು ಮಾರಿ ಶೋಕಿ ಜೀವನ ಸಾಗಿಸುತ್ತಿದ್ದಾರೆ. ಜನರನ್ನು ದರೋಡೆ ಮಾಡಲು, ಪೊಲೀಸರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಚಾಕು ಅಥವಾ ಬಂದೂಕು ಹೊಂದಿರುವ ಕುಖ್ಯಾತ ಸ್ನ್ಯಾಚರ್‌ಗಳನ್ನು ಹಿಡಿಯುವುದು ಕಷ್ಟ.
ಇತ್ತೀಚೆಗೆ ವರದಿಯಾದ ಪ್ರಕರಣದಲ್ಲಿ 11 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಕಳ್ಳನೊಬ್ಬ ದೆಹಲಿ ಪೊಲೀಸ್ ಪೇದೆಯೊಬ್ಬರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಶಹಬಾದ್ ಡೈರಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸತ್ಯೇಂದ್ರ ತನ್ನ ಮೋಟಾರು ಬೈಕ್‌ನಲ್ಲಿ ಸ್ನ್ಯಾಚರ್ ಅನ್ನು ಹಿಡಿಯಲು ತನ್ನ ಪ್ರಾಣ ಪಣಕ್ಕಿಟ್ಟ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸರಗಳ್ಳ ತನ್ನ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದಂತೆ, ಕಾನ್‌ಸ್ಟೆಬಲ್ ತನ್ನ ಬೈಕ್‌ನಲ್ಲಿ ಅವನ ಮುಂದೆ ಅಡ್ಡಬಂದು ಬಂದು, ಸಿನೀಮಿಯ ರೀತಿ ಕಳ್ಳನನ್ನು ಹಿಡಿದು ತಪ್ಪಿಸಿಕೊಳ್ಳದಂತೆ ತಡೆಯುತ್ತಾರೆ.