ಆನೆಗಳು ಮೊಸಳೆಗಳೊಂದಿಗೆ ವಿರಳವಾಗಿ ಹೋರಾಡುತ್ತವೆ. ಅಂಥದ್ದೇ ಒಂದು ಹೋರಾಟದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆ ಹಿಂಡು ಜೌಗು ಪ್ರದೇಶದ ಮೂಲಕ ನಡೆದುಕೊಂಡು ಹೋಗಿ ಮೊಸಳೆ ದಾಳಿ ನಡೆಸುತ್ತಿರುವ ವಿಡಿಯೋ ಇದಾಗಿದೆ. ಮರಿ ಆನೆಯೊಂದು ನೀರು ಕುಡಿಯಲು ಕೆರೆಗೆ ಹೋದಾಗ ಮೊಸಳೆ ಅದರ ಮೇಲೆ ಅಟ್ಯಾಕ್ ಮಾಡಲು ಬಂದಿದೆ. ಸಿಟ್ಟಿಗೆದ್ದ ಆನೆ ಅದನ್ನು ತಿವಿದು ಸಾಯಿಸುವ ದೃಶ್ಯ ವಿಡಿಯೋದಲ್ಲಿ ನೋಡಬಹುದು.
ಆನೆಯು ಸೊಂಡಿಲಿನಲ್ಲಿ ಮೊಸಳೆಯನ್ನು ಎತ್ತಿ ಎಸೆಯುವುದನ್ನು ನೋಡಬಹುದು. ಇದಕ್ಕೂ ಮುನ್ನ ಮೊಸಳೆ ಆನೆಯನ್ನು ಬಿಗಿಯಾಗಿ ಹಿಡಿದು ದಾಳಿ ಮಾಡುತ್ತದೆ. ಮರಿಯಾನೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ನಂತರ ದೊಡ್ಡ ಆನೆ ಬಂದು ಮೊಸಳೆಯನ್ನು ಕಾಲಿನಿಂದ ಹೊಸಕಿ ಹಾಕುತ್ತದೆ.