
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆಗಳಿಗಾಗಿ, ಡಿಸೆಂಬರ್‌ನಲ್ಲಿ ಗೋವಾ ರಾಜ್ಯಕ್ಕೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಅದರಲ್ಲು ಹಲವು ರಾಜ್ಯಗಳಲ್ಲಿ ನೈಟ್ ಕರ್ಪ್ಯೂ ಜೊತೆಗೆ ಕಠಿಣ ಕ್ರಮಗಳು ಜಾರಿಯಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗಿತ್ತು ಎಂದು ವರದಿಯಾಗಿದೆ. ಹೀಗಿರುವಾಗ ಗೋವಾದ ಈ ವಿಡಿಯೋ ನೋಡಿ ಹಲವಾರು ಮಂದಿ ಟೀಕಿಸಿದ್ದಾರೆ.
ಗೋವಾದಲ್ಲಿ ಇದುವರೆಗೆ ಒಮಿಕ್ರಾನ್ ರೂಪಾಂತರದ ಒಂದು ಪ್ರಕರಣ ವರದಿ ಆಗಿದೆ. ಆದರೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಭಾನುವಾರದಂದು, 3,604 ಪರೀಕ್ಷೆಗಳು ನಡೆದಿದ್ದು, 388 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಗೋವಾದ ಪಾಸಿಟಿವಿಟಿ ದರ ಶೇಕಡಾ 10.7 ಕ್ಕೆ ಏರಿಕೆಯಾಗಿದೆ. ಗೋವಾ ಸರ್ಕಾರ ರಾಜ್ಯದಲ್ಲಿ ಕಠಿಣ ನಿಯಮಗಳನ್ನ ಹೇರಿದ್ದರೂ ಇಷ್ಟು ದೊಡ್ಡ ಗುಂಪು ಹೇಗೆ ಸೇರಿತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.