ಕಟ್ಟಡ ಕಾರ್ಮಿಕನೊಬ್ಬನ ಡ್ಯಾನ್ಸ್ ಶೈಲಿಯನ್ನು ಬಾಲಿವುಡ್ನ ಖ್ಯಾತ ನಾಮರೂ ತಿರುಗಿ ನೋಡುವಂತೆ ಮಾಡಿದೆ.
ಕಲೆ ಯಾರ ಸ್ವತ್ತಲ್ಲ ಎಂಬ ಮಾತಿದೆ. ಈ ಮಾತಿಗೆ ತಕ್ಕಂತೆ ಕಟ್ಟಡ ನಿರ್ಮಾಣ ಕಾರ್ಮಿಕ ನೊಬ್ಬನ ಡ್ಯಾನ್ಸ್ ನೋಡಿದರೆ ಎಂತವರೂ ಮನಸೋಲುವುದು ಖಂಡಿತ. ಕಟ್ಟಡ ನಿರ್ಮಾಣ ಸ್ಥಳದಲ್ಲೇ ಕೆಲಸಗಾರರ ಸಮ್ಮುಖದಲ್ಲಿ ಆತ ಡ್ಯಾನ್ಸ್ ಪ್ರದರ್ಶನ ನೀಡುವುದನ್ನು ವಿಡಿಯೋದಲ್ಲಿ ನೋಡಬಹುದು.
ರೆಮೋ ಡಿಸೋಜಾ ಎಂಬ ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡು “ದಯವಿಟ್ಟು, ಈ ವೀಡಿಯೊವನ್ನು ನೋಡಿ ಆನಂದಿಸಿ ಮತ್ತು ಪ್ರತಿಭೆ ಮತ್ತು ನೃತ್ಯ ಕೌಶಲ್ಯ ಗೌರವಿಸಿ” ಎಂದು ಬರೆದಿದ್ದಾರೆ. ಹಾಗೆಯೇ, ಹೃತಿಕ್ ರೋಷನ್, ಟೈಗರ್ ಶ್ರಾಫ್, ಅಲ್ಲು ಅರ್ಜುನ್, ಮಾಧುರಿ ದೀಕ್ಷಿತ್, ಪ್ರಭುದೇವ ಸೇರಿ ದೇಶದ ಕೆಲವು ಅತ್ಯುತ್ತಮ ಡ್ಯಾನ್ಸರ್ಗಳನ್ನು ಟ್ಯಾಗ್ ಮಾಡಿದ್ದಾರೆ.
ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಅವರ ಪ್ರತಿಭೆಗೆ ಸಂಪೂರ್ಣ ವಿಸ್ಮಿತರಾಗಿದ್ದಾರೆ. ಪ್ರಮುಖವಾಗಿ ನಟ ಶಾಹಿದ್ ಕಪೂರ್ ಕೂಡ ಕಟ್ಟಡ ಕಾರ್ಮಿಕನ ಡ್ಯಾನ್ಸ್ನಿಂದ ಪ್ರಭಾವಿತರಾಗಿ ಟ್ವಿಟರ್ನಲ್ಲಿ ಮೆಚ್ಚುಗೆಯ ಮಾತುಗಳನ್ನು ದಾಖಲಿಸಿದ್ದಾರೆ ಮತ್ತು ತಮ್ಮ ಅಭಿಮಾನಿಗಳೊಂದಿಗೆ ವೀಡಿಯೊವನ್ನು ಮರು ಹಂಚಿಕೊಂಡರು.
ಕಟ್ಟಡ ಕಾರ್ಮಿಕರೆಲ್ಲ ಸುತ್ತುವರಿದು ಪ್ರೋತ್ಸಾಹ ನೀಡುವುದು, ಕಟ್ಟಡ ಕೆಲಸಕ್ಕೆ ಬಳಸುವ ಪೈಪನ್ನೇ ಹಿಡಿದು ಮೈ ಬೆಂಡ್ ಮಾಡುವುದು, ನೆಲದಿಂದ ಯಾವುದೇ ಸಹಾಯವಿಲ್ಲದೇ ಎದ್ದೇಳುವ ಸ್ಟೆಪ್ ಎಂತವರನ್ನೂ ಮೈನವಿರೇಳಿಸುತ್ತಿದೆ.