
ಕೊಳದಲ್ಲಿ ಪುಟ್ಟ ಬಾತುಕೋಳಿಯೊಂದು ಇರುತ್ತದೆ. ಇದನ್ನು ನೋಡಿದ ಹುಲಿ ಬೇಟೆಗೆಂದೇ ಕೊಳಕ್ಕೆ ಇಳಿಯುತ್ತದೆ. ಆದರೆ ಇದನ್ನು ಗಮನಿಸಿದ ಬಾತುಕೋಳಿ ಹುಲಿ ಕಣ್ಣಿನಿಂದ ತಪ್ಪಿಸಿಕೊಳ್ಳಲು ನೀರಿನೊಳಗೆ ಮುಳುಗುತ್ತದೆ.
ಹುಲಿ ತಪ್ಪಿಸಿಕೊಂಡ ಬಾತುಕೋಳಿಗಾಗಿ ಹುಡುಕಾಡುತ್ತಿದ್ದರೆ ಅದು ಹುಲಿಯ ಹಿಂಭಾಗದಲ್ಲಿ ನೀರಿನ ಮೇಲೆ ಕಾಣಿಸಿಕೊಳ್ಳುತ್ತದೆ. ಇದೇ ರೀತಿ ಹುಲಿ ಹತ್ತಿರ ಬಂದಂತೆಲ್ಲಾ ಬಾತುಕೋಳಿ ಜಾಣತನದಿಂದ ನೀರಲ್ಲಿ ಮುಳುಗಿ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಈ ವಿಡಿಯೋವನ್ನ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು 1 ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದ್ದು ಸ್ಮಾರ್ಟ್ ಬಾತುಕೋಳಿ ಎಂದು ನೆಟ್ಟಿಗರು ಹೊಗಳಿದ್ದಾರೆ.