ಚೀನಾದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವೈರಸ್‌ನ ಅಲೆಯಿಂದಾಗಿ ದೇಶದ ಆಸ್ಪತ್ರೆಯಲ್ಲಿ ದಟ್ಟಣೆ, ಸ್ಮಶಾನಗಳು ತುಂಬಿ ತುಳುಕುತ್ತಿವೆ. ವರದಿಗಳ ಪ್ರಕಾರ, ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜಿನ ಪ್ರಕಾರ, ಈ ವಾರ ಒಂದೇ ದಿನದಲ್ಲಿ ಚೀನಾದಲ್ಲಿ ಸುಮಾರು 37 ಮಿಲಿಯನ್ ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ.
ಈ ನಡುವೆ, ಚೀನಾದ ತರಕಾರಿ ಮಾರುಕಟ್ಟೆಯಲ್ಲಿ ದಂಪತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದಂಪತಿ ದಿನಸಿ ವಸ್ತುಗಳನ್ನು ಖರೀದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ, ಸುತ್ತಲೂ ರಕ್ಷಣಾತ್ಮಕ ಪ್ಲಾಸ್ಟಿಕ್ ಹಾಳೆಯನ್ನು ಹೊಂದಿದ್ದು, ಅದನ್ನು ಛತ್ರಿ ಮೂಲಕ ಹಿಡಿದಿಟ್ಟುಕೊಳ್ಳಲಾಗಿದೆ.
ಈ ರಕ್ಷಣಾತ್ಮಕ ಪ್ಲಾಸ್ಟಿಕ್ ಕವರ್‌ನಲ್ಲಿ ಇಬ್ಬರೂ ನಿಂತುಕೊಂಡು ನಡೆಯುತ್ತಿರುವುದು ಕಂಡುಬರುತ್ತದೆ. ವೀಡಿಯೊದಲ್ಲಿ, ಮಹಿಳೆ ತರಕಾರಿಗಳನ್ನು ಖರೀದಿಸಲು ಮುಂದಾದಾಗ, ಅವಳು ಕವರ್‌ನಿಂದ ತನ್ನ ಕೈಯನ್ನು ಸ್ವಲ್ಪ ತೆಗೆದು, ಪಾರ್ಸೆಲ್ ತೆಗೆದುಕೊಂಡು ತಕ್ಷಣವೇ ಅದನ್ನು ಮತ್ತೆ ಕೆಳಕ್ಕೆ ಎಳೆದಳು. ಈ ವಿಡಿಯೋಗೆ ಥರಹೇ ಚಿಂತೆವಾರಿ ಕಮೆಂಟ್‌ಗಳು ಬರುತ್ತಿದ್ದು, ಭಾರತದಲ್ಲಿ ಮಾತ್ರ ಇಂಥ ಸ್ಥಿತಿ ಬರದಿರಲಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.