ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದಂದು ಉಡುಗೊರೆಯನ್ನು ನಿರೀಕ್ಷಿಸುತ್ತಾರೆ. ತಮ್ಮ ಪ್ರೀತಿ ಪಾತ್ರರು ಏನೂ ಗಿಫ್ಟ್ ನೀಡಿಲ್ಲವೆಂದರೆ ಬೇಜಾರಾಗುತ್ತಾರೆ. ಅದೇ ಗಿಫ್ಟ್ ಸಿಕ್ಕಾಗ ಆಗುವ ಖುಷಿ ಇದೆಯಲ್ವಾ, ಅದನ್ನು ವರ್ಣಿಸೋಕೆ ಸಾಧ್ಯವಿಲ್ಲ.
ಇಲ್ಲೊಬ್ಬ ಬಾಲಕನಿಗೂ ಆತನ ತಾಯಿ ಬರ್ತ್ ಡೇ ಗಿಫ್ಟ್ ನೀಡಿದ್ರು. ಹುಡುಗನ ರಿಯಾಕ್ಷನ್ ಹೇಗಿತ್ತು ಗೊತ್ತಾ..?ಬಾಲಕನೊಬ್ಬನ ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿದ ಬಳಿಕ ಆತನಿಗೆ ತಾಯಿ ಸರ್ಪೈಸ್ ಉಡುಗೊರೆ ನೀಡಿದ್ದಾರೆ.
ಏನಿರಬಹುದು ಎಂದು ಆಲೋಚಿಸುತ್ತಾ ಬಾಲಕ ಗಿಫ್ಟ್ ಪ್ಯಾಕ್ ಓಪನ್ ಮಾಡಿದಾಗ ಆತನಿಗೆ ಕಂಡಿದ್ದು ಮೊಬೈಲ್. ಸುಂದರವಾದ ಉಡುಗೊರೆ ಮೊಬೈಲ್ ನೋಡುತ್ತಲೇ ಆತನ ಆನಂದಕ್ಕೆ ಪಾರವೇ ಇರದಂತಾಗಿದೆ.
BIG NEWS: ED ವಿಚಾರಣೆಗೆ ಹಾಜರಾದ ಟಾಲಿವುಡ್ ಸ್ಟಾರ್ ರವಿತೇಜ
ಸದ್ಯ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. “ತಾಯಿಯು ತನ್ನ ವಿಶೇಷ ಮಗುವಿಗೆ ಜನ್ಮದಿನದಂದು ಮೊಬೈಲ್ ಫೋನ್ ಉಡುಗೊರೆಯಾಗಿ ನೀಡುವ ಈ ಸುಂದರ ವಿಡಿಯೋದೊಂದಿಗೆ ಈ ದಿನವನ್ನು ಸಂಭ್ರಮಿಸೋಣ” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ಖುಷಿಪಟ್ಟಿದ್ದಾರೆ.