
ಈ ವಿಡಿಯೋವನ್ನು ಮೊದಲು ರೆಡ್ಡಿಟ್ ನಲ್ಲಿ ಹಾಕಲಾಗಿದ್ದು ಅದನ್ನು ‘ಘರ್ ಕಾ ಕಾಲೇಶ್’ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ‘ಎಕ್ಸ್’ ನಲ್ಲಿ ಹಾಕಿದ್ದಾರೆ. ಕ್ಷಣಾರ್ಧದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೇ ಇದನ್ನು ನೋಡಿದವರು ವಿಧವಿಧವಾದ ಕಮೆಂಟ್ ಹಾಕುತ್ತಿದ್ದಾರೆ.
ವಿಡಿಯೋದಲ್ಲಿ ಕಂಡು ಬರುವಂತೆ ಈ ಇಬ್ಬರೂ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರದಲ್ಲಿಯೇ ಇದ್ದು, ಆದರೆ ಇಬ್ಬರ ಸಮವಸ್ತ್ರ ವಿಭಿನ್ನವಾಗಿ ಇರುವ ಕಾರಣ ಬಹುಶಃ ಬೇರೆ ಬೇರೆ ಶಾಲೆಯವರು ಇರಬೇಕೆಂದು ಕಾಣಿಸುತ್ತದೆ. ಈ ಇಬ್ಬರು ವಿದ್ಯಾರ್ಥಿನಿಯರು ಯಾವ ಕಾರಣಕ್ಕೆ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿಲ್ಲ.
ಇದನ್ನು ವೀಕ್ಷಿಸಿರುವ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ್ಯ ಮಾಡುತ್ತಾ ಕಮೆಂಟ್ ಗಳನ್ನು ಹಾಕುತ್ತಿದ್ದು, ಆದರೆ ಬಹುತೇಕರು ಇನ್ನೂ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವಂತೆ ಕಾಣುವ ಈ ವಿದ್ಯಾರ್ಥಿನಿಯರು ಈಗಲೇ ಅಕ್ರಮಣಕಾರಿ ವರ್ತನೆ ತೋರಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಈ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಕೊಡಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.
— Ghar Ke Kalesh (@gharkekalesh) August 17, 2024