ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ರಸ್ತೆಯ ಬದಿಯಲ್ಲಿ ನಿಂತಿದ್ದ ನಾಯಿಯೊಂದನ್ನು ಕೋಣ ಅನಿರೀಕ್ಷಿತವಾಗಿ ದಾಳಿ ಮಾಡಿ ಮೇಲಕ್ಕೆ ಎಸೆದಿದೆ. ಈ ಭಯಾನಕ ದೃಶ್ಯಾವಳಿ ಇನ್‌ಸ್ಟಾಗ್ರಾಮ್‌ನಲ್ಲಿ ‘sharnuud_anirkhan’ ಎಂಬ ಖಾತೆಯಲ್ಲಿ ಅಪ್‌ಲೋಡ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿದೆ.
ವಿಡಿಯೋದಲ್ಲಿ ಕೋಣಗಳ ಕ್ರೀಡಾ ಸ್ಪರ್ಧೆಯಂತೆ ಕಾಣುವ ದೃಶ್ಯವಿದೆ. ಪ್ರೇಕ್ಷಕರು ತಡೆಗೋಡೆಯ ಹಿಂದೆ ನಿಂತಿದ್ದರೆ, ಕೋಣಗಳು ರಸ್ತೆಯಲ್ಲಿ ಓಡಾಡುತ್ತಿವೆ. ಒಂದು ಮೂಲೆಯಲ್ಲಿ ನಾಯಿಯೊಂದು ಏನಾಗುತ್ತಿದೆ ಎಂದು ತಿಳಿಯದೆ ಶಾಂತವಾಗಿ ನಿಂತಿದೆ. ಇದ್ದಕ್ಕಿದ್ದಂತೆ ಕೋಣವೊಂದು ನಾಯಿಯ ಬಳಿ ಧಾವಿಸಿ ತನ್ನ ಕೊಂಬುಗಳಿಂದ ಅದನ್ನು ಮೇಲಕ್ಕೆತ್ತಿ ಬಲವಾಗಿ ಎಸೆಯುತ್ತದೆ. ನಾಯಿಯು ನೆಲಕ್ಕೆ ಬೀಳುವ ಮುನ್ನವೇ ಕೋಣವು ಮತ್ತೆ ದಾಳಿ ಮಾಡುತ್ತದೆ. ಹೀಗೆ ಮೂರು ಬಾರಿ ನಾಯಿಯನ್ನು ಎಸೆದು ಬಳಿಕ ಅದು ಹೇಗೋ ತಪ್ಪಿಸಿಕೊಳ್ಳುತ್ತದೆ.
ಈ ಆಘಾತಕಾರಿ ದೃಶ್ಯವನ್ನು ಕಂಡ ನೆಟ್ಟಿಗರು ಕಂಗಾಲಾಗಿದ್ದಾರೆ. ನಾಯಿಯ ಯೋಗಕ್ಷೇಮದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. “ನಾಯಿ ಹೇಗಿದೆ ?” ಎಂದು ಕೆಲವರು ಪ್ರಶ್ನಿಸಿದರೆ, “ಇದು ಪ್ರಾಣಿಗಳ ಮೇಲಿನ ಹಿಂಸೆ” ಎಂದು ಇನ್ನೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 176,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಘಟನೆಗಳಲ್ಲಿ ಪ್ರಾಣಿಗಳ ಮತ್ತು ಜನರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
View this post on Instagram