ಒಗ್ಗಟ್ಟಿನಲ್ಲಿ ಬಲವಿದೆ ಅನ್ನೊದಕ್ಕೆ ಈ ವಿಡಿಯೋ ಬೆಸ್ಟ್ ಎಗ್ಸಾಂಪಲ್. ಹಸಿವಿನಿಂದ, ಕೆರಳಿದ ಸಿಂಹಿಣಿಯೊಂದು ಎಮ್ಮೆ ಹಿಂಡಿನತ್ತ ಸೈಲೆಂಟಾಗಿ ಬಂದಿತ್ತು. ಚಿಕ್ಕ ಅವಕಾಶ ಸಿಕ್ಕಿದ್ದೇ ತಡ ಅದೇ ಹಿಂಡಿನಲ್ಲಿದ್ದ ಎಮ್ಮೆ ಕರುವಿಗೆನೇ ಬಾಯಿ ಹಾಕಿ ಹಿಡಿದು ದರದರನೇ ಎಳೆಯೋಕೆ ಶುರು ಮಾಡಿತ್ತು.
ಒಮ್ಮಿಂದೊಮ್ಮೆ ಆದ ಸಿಂಹಿಣಿಯ ದಾಳಿಗೆ ಎಮ್ಮೆಗಳು ಶಾಕ್ ಆಗಿದ್ದವು. ಹಾಗಂತ ಅವು ಸೈಲೆಂಟಾಗಿರಲಿಲ್ಲ.. ಬದಲಾಗಿ ಆ ಎಮ್ಮೆಗಳು ಕೂಡಾ ಸಿಂಹಿಣಿಯನ್ನೇ ಬೆದರಿಸೋಕೆ ಮುಂದಾದವು.
ಮದುವೆ ಮೆರವಣಿಗೆಯಲ್ಲಿ ಕುದುರೆ, ಡಿಜೆ ಬಳಸಿದ್ದಕ್ಕೆ ಮೇಲ್ವರ್ಗದವರ ದಬ್ಬಾಳಿಕೆ: ಘರ್ಷಣೆಯಲ್ಲಿ ಪೊಲೀಸರೂ ಸೇರಿ ಹಲವರಿಗೆ ಗಾಯ
ಒಂದೆರಡು ಕ್ಷಣ ಸಿಂಹಿಣಿ ಕೂಡಾ ಸೋಲೋಪ್ಪಿಕೊಂಡಿರಲಿಲ್ಲ. ಆದರೆ ಅಷ್ಟೂ ಎಮ್ಮೆಗಳು ಒಟ್ಟೊಟ್ಟಿಗೆ ತಿರುಗಿ ಬಿದ್ದರಿಂದ ಅದು ಕೂಡಾ ಹೆದರಿಕೊಂಡು, ಕರುವನ್ನ ಅಲ್ಲೇ ಬಿಟ್ಟು ಓಡಿ ಹೋಗಿತ್ತು.
ಈ ವಿಡಿಯೋ beauty.wildlifee ಅನ್ನೊ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರೋ ಈ ವಿಡಿಯೋವನ್ನ ಈಗಾಗಲೇ 13,400 ಜನರು ಈಗಾಗಲೇ ವೀಕ್ಷಣೆ ಮಾಡಿದ್ದಾರೆ.